ಬೆಂಗಳೂರು: ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ ಬೆನ್ನಲ್ಲೇ ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಗೃಹಸಚಿವ ಜಿ. ಪರಮೇಶ‍್ವರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಮುಸ್ಲಿಮರಿಗೆ ಸಾಂಪ್ರದಾಯಿಕ ಹಿಜಾಬ್ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ಅನುಮತಿ ನೀಡಿದರೆ ನಾವೂ ಕೇಸರಿ ಬಟ್ಟೆ ಧರಿಸಿ ಶಿಕ್ಷಣ ಸಂಸ್ಥೆಗೆ ಹೋಗಬೇಕಾಗುತ್ತದೆ ಎಂದು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಬಿಜೆಪಿ ಕೂಡಾ ಇದಕ್ಕೆ ಧ್ವನಿಗೂಡಿಸಿತ್ತು.
ಇದರ ಬೆನ್ನಲ್ಲೇ ಇದೀಗ ಗೃಹ ಸಚಿವ ಜಿ. ಪರಮೇಶ್ವರ್ ಈ ಬಗ್ಗೆ ಇನ್ನೂ ಆದೇಶ ನೀಡಿಲ್ಲ. ಯೋಚಿಸಿ ಹಿಜಾಬ್ ರದ್ದು ವಾಪಸಾತಿ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ನೇರವಾಗಿ ಹಿಜಾಬ್ ಗೆ ನಿರ್ಬಂಧವಿಲ್ಲ ಎಂದಿದ್ದರು. ಆದರೆ ನಾವು ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹಿಜಾಬ್ ವಿಚಾರದಿಂದ ಈಗ ಮತ್ತೆ ಹಿಂದೂ-ಮುಸ್ಲಿಮರ ನಡುವೆ ವಸ್ತ್ರಸಂಹಿತೆ ಸಂಘರ್ಷಕ್ಕೆ ವೇದಿಕೆ ಸೃಷ್ಟಿಯಾಗಿತ್ತು. ಆದರೆ ಹಿಜಾಬ್ ನಿಷೇಧ ವಾಪಸಾತಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಗೃಹಸಚಿವರು ಎಚ್ಚರಿಕೆಯ ನಡೆ ಇಡಲು ತೀರ್ಮಾನಿಸಿದ್ದಾರೆ.