ಬೆಂಗಳೂರು: ನಮ್ಮ ಸಾಹೇಬರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿಯ ಯಾರಾದ್ರೂ ಕೆಟ್ಟದಾಗಿ ಮಾತನಾಡಿದ್ರೆ ಸುಮ್ಮನಿರಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿಯವರಿಗೆ ಕೌಂಟರ್ ನೀಡಿದ್ದಾರೆ.
ಮಾಧ್ಯಮದ ಮುಂದೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಕೆಟ್ಟ ಪದಗಳಿಂದ ಬಿಜೆಪಿಯವರು ಮಾತನಾಡುವುದು ದಲಿತ ಪ್ರೀತಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಸಂಸದನಾ ಹೆಸರು ಬರೆದಿಟ್ಟು ನಮ್ಮ ಕ್ಷೇತ್ರದ ದಲಿತನೊಬ್ಬ ಸತ್ತು ಹೋದ್ರೆ, ಅವರ ಕುಟುಂಬವನ್ನು ಮಾತನಾಡಿಸಲು ಬಂದಿಲ್ಲ. ಇದು ದಲಿತಾ ಪ್ರೀತಿನಾ ಎಂದು ಕೇಳಿದ್ದಾರೆ.
ನನಗೆ ನಿಮ್ಹಾನ್ಸ್ ಅಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಹೇಳುವ ಛಲವಾದಿ ನಾರಾಯಣಸ್ವಾಮಿ ಅವರೇ ಮೊದಲು ನೀವು ಅಲ್ಲಿ ಚಿಕಿತ್ಸೆ ಪಡೆಯಿರಿ. ಅದರ ಅವಶ್ಯಕತೆ ನಿಮಗೆ ಜಾಸ್ತಿ ಇದೆ. ಇನ್ನೂ ಒಬ್ಬರೇ ಹೋಗದೆ 3 ಅಡು ಕಟೌಟ್ ರವಿಕುಮಾರ್ ಅವರನ್ನು ಕರೆದುಕೊಂಡು ಹೋಗ. ಇನ್ನೂ ಯತ್ನಾಳ್ ಬರಲ್ಲ, ಆದರೆ ಅವರನ್ನು ಎತ್ತಾಕೊಂಡು ಹೋಹಿ. ಸಾಧ್ಯವಾದರೆ ಪ್ರತಾಪ್ ಸಿಂಹ ಅವರನ್ನು ಕರೆದುಕೊಂಡು ಹೋಗಿ. ಇನ್ನೂ ಆರ್ ಅಶೋಕ್ ಹಾಗೂ ವಿಜಯೇಂದ್ರಗೆ ಸದ್ಯ ಇದರ ಅವಶ್ಯಕತೆಯಿಲ್ಲ ಎಂದರು.
ಒಂದು ವೇಳೆ ನಿಮ್ಹಾನ್ಸ್ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇದ್ದಲ್ಲಿ, ಹೆಚ್ಚಿನ ಚಿಕಿತ್ಸೆ ಸಿಎಂ ರಿಲೀಫ್ ಫಂಡ್ ಮೂಲಕ ನಾನು ಒದಗಿಸುತ್ತೇನೆ ಎಂದು ಟಾಂಗ್ ಕೊಟ್ಟರು.
ಸಿಎಂ ಸಿದ್ದರಾಮಯ್ಯ ಬಗ್ಗೆ ಬಾಯಿಗೆ ಬಂದ ಹಾಗೇ ಮಾತನಾಡುವುದು ಬಿಜೆಪಿಯವರು ಸಂವಿಧಾನ ಪೀಠಕ್ಕೆ ಕೊಡುವ ಮರ್ಯಾದೆನಾ? ರವಿಕುಮಾರ್ ಅವರು ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ಬಾಯಿಗೆ ಬಂದ ಹಾಗೇ ಮಾತನಾಡಿದರು. ನೀವು ನಾಯಿ ಅಂತಾ, ಮಹಿಳೆಯ ತೇಜೋವಧೆ ಮಾಡಿದ್ರೆ ಸರಿನಾ?
ನಾವು ಕೋತಿಗಳನ್ನು ಕೋತಿ ಅಂತಾ ಹೇಳಿದ್ರೆ ತಪ್ಪು. ಅದು ಬೇರೆ ಸುಂದರವಾದ ಕೋತಿಗಳು ಅಂತಾ ಹೇಳಿದ್ದೇನೆ. ನೀವು ಸುಂದರವಾದ ಪದವನ್ನು ಯಾಕೆ ಗಮನಿಸಿಲ್ಲ.
ನಾರಾಯಣ ಸ್ವಾಮಿ ಅವರೇ ಏನಾದ್ರೂ ನಮ್ಮ ಖರ್ಗೆ ಸಾಹೇಬರು, ಸಿಎಂ ಬಗ್ಗೆ ಮಾತನಾಡಿದ್ರೆ ನಾವು ಕೂಡಾ ಮಾತನಾಡ್ತೇವೆ ಎಂದು ಕೌಂಟರ್ ನೀಡಿದ್ದಾರೆ. ದಲಿತರ ಬಗ್ಗೆ ಪ್ರೀತಿ ಅಂದಿರುವ ನಾರಾಯಣಸ್ವಾಮಿ ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆಂದು ರಿಪೋರ್ಟ್ ಕೊಡಲಿ ಎಂದಿದ್ದಾರೆ.