ಗೃಹ ಸಚಿವ ಪರಮೇಶ್ವರ್ ಪಿಎಗೆ ಮಂಗಳಾರತಿ!
ಬೆಂಗಳೂರು: ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷೆ ಪತ್ರಿಕೆ ಕೊಡುವಂತೆ ಎಡಿಜಿಪಿ ಕಚೇರಿಗೆ ಹೋಗಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಅವರ ಪಿ ಎ ಕೇಶವ್ ಮಂಗಳಾರತಿ ಮಾಡಿಸಿಕೊಂಡು ಬಂದಿದ್ದಾರೆ.
ತಮ್ಮ ಮಗ ಈ ಬಾರಿ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಗೆ ಹಾಜರಾಗುತ್ತಿರುವ ಹಿನ್ನಲೆಯಲ್ಲಿ ಆತನಿಗೆ ಹುದ್ದೆ ಕೊಡಿಸಲು ಲಾಬಿ ನಡೆಸಲು ಕೇಶವ್ ಗೃಹ ಸಚಿವರ ಹೆಸರು ಹೇಳಿಕೊಂಡು ಎಡಿಜಿಪಿ ರಾಘವೇಂದ್ರ ಔರಾದ್ಕರ್ ಕಚೇರಿಗೆ ತೆರಳಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ಯಾರದೇ ಪ್ರಭಾವಕ್ಕೆ ಮಣಿಯದಿರಲು ನಿರ್ಧರಿಸಿರುವ ಔರಾದ್ಕರ್ ಕೇಶವ್ ಗೆ ಚೆನ್ನಾಗಿ ಬಯ್ದು ತಪ್ಪೊಪ್ಪಿಗೆ ಬರೆದು ಕಳುಹಿಸಿದ್ದಾರೆ ಎನ್ನಲಾಗಿದೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.