ಭಾರತ, ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ನಡೆಸಲು ಡೊನಾಲ್ಡ್ ಟ್ರಂಪ್ ಯಾರು

Krishnaveni K

ಭಾನುವಾರ, 11 ಮೇ 2025 (15:51 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸಲು ಡೊನಾಲ್ಡ್ ಟ್ರಂಪ್ ಯಾರು? ಅವರ ಮಾತು ಕೇಳಿ ಕದನ ವಿರಾಮಕ್ಕೆ ಒಪ್ಪಬೇಕಿರಲಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಘರ್ಷ ಸ್ಥಿತಿ ಏರ್ಪಟ್ಟಿದೆ. ತನ್ನ ಮೇಲೆ ಡ್ರೋಣ್, ಕ್ಷಿಪಣಿ ಮೂಲಕ ದಾಳಿಗೆ ಬಂದ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು. ಇನ್ನೇನು ಅಧಿಕೃತವಾಗಿ ಯುದ್ಧ ಘೋಷಣೆಯೊಂದೇ ಬಾಕಿಯಿತ್ತು.

ಆಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿ ಕದನ ವಿರಾಮಕ್ಕೆ ಮನವೊಲಿಸಿದರು. ಇದನ್ನು ಭಾರತ ಮತ್ತು ಪಾಕಿಸ್ತಾನ ಎರಡೂ ಒಪ್ಪಿ ನಾಳೆ ಮಾತುಕತೆಗೆ ಮುಂದಾಗಿತ್ತು. ಆದರೆ ಇದರ ಬಗ್ಗೆ ಈಗ ದೇಶದೊಳಗೇ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ ಹೊರಟ್ಟಿ ‘ಪಾಕಿಸ್ತಾನ ಏನಿದ್ದರೂ ನಮಗೆ ಶತ್ರು ರಾಷ್ಟ್ರವೇ. ಯಾರದ್ದೋ ಮಾತು ಕೇಳಿ ಪಾಕಿಸ್ತಾನದ ವಿರುದ್ಧ ಕದನ ವಿರಾಮಕ್ಕೆ ಒಪ್ಪಬಾರದಿತ್ತು. ಈ ಸಂಘರ್ಷದಲ್ಲಿ ಪಾಕಿಸ್ತಾನವನ್ನು ಸರ್ವನಾಶ ಮಾಡಬೇಕಿತ್ತು. ಪಾಕಿಸ್ತಾನ ಸಾಯುವವರೆಗೂ ನಮಗೆ ವೈರಿಗಳೇ. ಎಂದಿಗೂ ಅವರಿಂದ ಒಳ್ಳೆಯದಾಗಲ್ಲ. ಭಾರತ ಪಾಕ್ ನಡುವೆ ಮಧ್ಯಸ್ಥಿಕೆ ಮಾಡಲು ಟ್ರಂಪ್ ಯಾರು? ಅಮೆರಿಕಾ ವಿಚಾರದಲ್ಲಿ ನಾವು ಹೇಳಿದರೆ ಅವರು ಕೇಳುತ್ತಾರಾ? ಮೋದಿಯವರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಟ್ರಂಪ್ ಮಾತು ಕೇಳಿದ್ದು ತಪ್ಪು ಎಂದು ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ