15 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡೋಲ್ಲ ಎಂದ ಗೃಹಸಚಿವ

ಸೋಮವಾರ, 1 ಜುಲೈ 2019 (17:11 IST)
ಕಾಂಗ್ರೆಸ್ ನ ಶಾಸಕರು ಮೀಡಿಯಾಗಳಲ್ಲಿ ವರದಿಯಾಗುತ್ತಿರುವಂತೆ ರಾಜೀನಾಮೆ ನೀಡೋದಿಲ್ಲ. ಸರಕಾರ ಭದ್ರವಾಗಿರುತ್ತದೆ. ಹೀಗಂತ ರಾಜ್ಯ ಗೃಹ ಸಚಿವ ಹೇಳಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿದ್ದು, ಮೈತ್ರಿ ಸರಕಾರದಲ್ಲಿ 15 ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಸರಕಾರ ಪತನವಾಗುತ್ತದೆ. ಆದರೆ ಆ ರೀತಿ ಆಗೋದಕ್ಕೆ ಸಾಧ್ಯವೇ ಇಲ್ಲ. ರಾಜ್ಯದಲ್ಲಿರುವ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರ ಇನ್ನುಳಿದ ನಾಲ್ಕು ವರ್ಷ ಸುಭದ್ರ ಆಡಳಿತ ನಡೆಸಲಿದೆ ಎಂದು ಹೇಳಿದ್ರು.

ಶಾಸಕ ಆನಂದ ಸಿಂಗ್ ಅವರು ರಾಜೀನಾಮೆ ಪತ್ರ ನೀಡಿಲ್ಲ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಇದೆಲ್ಲಾ ಊಹಾಪೋಹ ಅಷ್ಟೇ. ಸಚಿವ ಡಿ.ಕೆ.ಶಿವಕುಮಾರ್ ಅವರ ವರ್ತನೆಯಿಂದ ಶಾಸಕ ಆನಂದ ಸಿಂಗ್ ರಾಜೀನಾಮೆ ನೀಡಿದ್ದಾರೆ ಎನ್ನೋದು ಸರಿಯಾದ ಮಾತಲ್ಲ ಎಂದ್ರು.

ಆನಂದ ಸಿಂಗ್ ರಾಜೀನಾಮೆ ಅಂಗೀಕಾರ ಆಗಿಲ್ಲ. ಹೀಗಾಗಿ ರಾಜ್ಯದ ಮೈತ್ರಿ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲ ಅಂತ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ