ಹೊಸ ಪಾಸ್ ಸಿಗೋದಿಲ್ಲ ಎಂದ ಗೃಹ ಸಚಿವ

ಮಂಗಳವಾರ, 19 ಮೇ 2020 (20:07 IST)
ವಿಶೇಷವಾಗಿ ಹೊರ ರಾಜ್ಯದಿಂದ ಬಂದ ಜನರಿಂದ ರಾಜ್ಯದಲ್ಲಿ ಕೋವಿಡ್ -19  ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ.

ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿರುವುದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತೀರ್ಮಾನ ತೆಗೆದುಕೊಂಡಿದ್ದು, ಕಳೆದ ಒಂದು ವಾರದಿಂದ ನೀಡಲಾಗುತ್ತಿದ್ದ ಹೊಸ ಪಾಸ್ ವಿತರಣೆಯನ್ನು ಮೇ 31 ರವರೆಗೆ ನಿಲ್ಲಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯ ಆರ್ಥಿಕವಾಗಿ ಸಧೃಡವಾಗಿದೆ. ತಾತ್ಕಾಲಿಕವಾಗಿ ಹಣಕಾಸಿನ ತೊಂದರೆ ಕೋವಿಡ್ ನಿಂದ ಆಗಿದ್ದರೂ ಅದನ್ನು ಮೆಟ್ಟಿನಿಲ್ಲುವ ಶಕ್ತಿ ರಾಜ್ಯಕ್ಕಿದೆ.  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳ ಫಿಜಿಕಲ್ ಡೋರ್ ಶೀಟ್ ಅನ್ನು 3 ರಿಂದ 5% ಹೆಚ್ಚಳ ಮಾಡಿದ್ದಾರೆ.

ಒಟ್ಟು ಜಿಡಿಪಿಯ 2% ನಾವು ಸಾಲವನ್ನು ಹೆಚ್ಚಿಗೆ ತೆಗೆದುಕೊಳ್ಳಬಹುದಾಗಿದೆ. ಇದರಿಂದ ರಾಜ್ಯಕ್ಕೆ 15 ರಿಂದ 20 ಸಾವಿರ ಕೋಟಿ ರೂಪಾಯಿ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ