ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಜ.3ರಂದು ಅ.3 ಗಂಟೆಗೆ ಸುಳ್ಯದ ಅಮರಶ್ರೀಭಾಗ್ ನ ಜಾನಕಿ ವೆಂಕಟ್ರಮಣಗೌಡ ಸಭಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ 2019-20 ರ ಸಾಲಿನ ಗೌರವ ಪ್ರಶಸ್ತಿಯನ್ನು ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಎನ್.ಎಸ್.ದೇವಿಪ್ರಸಾದ್ ಸಂಪಾಜೆ, ಚಿತ್ರ ಕಲಾವಿದ ದಿ.ಮೋಹನ್ ಸೋನಾ, ಜಾನಪದ ಕಲಾವಿದೆ ಪಂಜಿಪಳ್ಳ ಇಂದ್ರಾಕ್ಷಿ ವೆಂಕಪ್ಪ ಅವರಿಗೆ, 2020-21 ರ ಸಾಲಿನ ಪ್ರಶಸ್ತಿಯನ್ನು ಸಾಹಿತಿ ಕುಂ ಪಿಟ್ಟಿ ಶಿವರಾಮ ಗೌಡ, ನಾಟಿ ವೈದ್ಯ ಪದ್ಮಯ್ಯ ಗೌಡ ಪರಿವಾರಕಾನ, ಸಂಶೋಧನಾ ಕ್ಷೇತ್ರದಲ್ಲಿ ಡಾ.ಕೋರನ ಸರಸ್ವತಿ ಪ್ರಕಾಶ್ ಅವರಿಗೆ ನೀಡಲಾಗುವುದು. ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ಸುನಿಲ್‌ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ರಾಜ್ಯ ಅರೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸುವರು. ರಾಜ್ಯ ಮೀನುಗಾರಿಕಾ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮುಖ್ಯ ಅತಿಥಿಯಾಗಿ ಬಾಗವಹಿಸಲಿದ್ದಾರೆ. ಲೋಕಸಭಾ ಸಂಸದ ನಳಿನ್‌ಕುಮಾರ್ ಕಟೀಲ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ನ.ಪಂ. ಅಧ್ಯಕ್ಷ ವಿನಯ್‌ಕುಮಾರ್ ಕಂದಡ್ಕ ಉಪಸ್ಥಿತರಿರಲಿದ್ದಾರೆ. ಚಾಮರಾಜನಗರ ಬಾಲಕಿಯರ ಸರಕಾರಿ ಪದವಿಪೂರ್ವ
ಕಾಲೇಜಿನ ಉಪನ್ಯಾಸಕ ಪಟ್ಟಡ ಶಿವಕುಮಾರ್ ಪ್ರಶಸ್ತಿ ಪುರಸ್ಕೃತರ ಬಗ್ಗೆ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸುಳ್ಯದ ಗಾಯಕರುಗಳಾದ ಕೆ.ಆರ್.ಗೋಪಾಲಕೃಷ್ಣ, ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಹಾಗೂ ಮಯೂರ್ ಅಂಬೆಕಲ್ಲು ಅವರ ಸ್ವರದಲ್ಲಿ ಅರೆಭಾಷೆ ಹಾಡುಗಳು ಮೂಡಿಬರಲಿವೆ.