ಧರ್ಮಸ್ಥಳ ಮಂಜುನಾಥನಿಗೆ ಕೆಟ್ಟ ಹೆಸರು ತಂದ್ರೆ ಈ ಸರ್ಕಾರ ಸರ್ವನಾಶವಾಗುತ್ತದೆ: ಜನಾರ್ಧನ ರೆಡ್ಡಿ

Krishnaveni K

ಸೋಮವಾರ, 21 ಜುಲೈ 2025 (10:59 IST)
ಗಂಗಾವತಿ: ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಕೆಟ್ಟ ಹೆಸರು ತಂದರೆ ಈ ಸರ್ಕಾರ ಸರ್ವನಾಶವಾಗುತ್ತದೆ ಎಂದು ಗಾಲಿ ಜನಾರ್ಧನ ರೆಡ್ಡಿ ಕಿಡಿ ಕಾರಿದ್ದಾರೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಕೊಲೆಗಳು ಮತ್ತು ಶವ ಹೂತಿಟ್ಟ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ರಚಿಸಿ ತನಿಖೆ ನಡೆಸಲು ಆದೇಶಿಸಿದೆ. ಇದರ ಬೆನ್ನಲ್ಲೇ ಜನಾರ್ಧನ ರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಸಮುದಾಯವನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಇವತ್ತು ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ತನಿಖೆಗೊಪ್ಪಿಸಿದೆ. ಇಷ್ಟು ದಿನ ಧರ್ಮಸ್ಥಳ ಪ್ರಕರಣದ ವಿಚಾರಣೆ ವಿಳಂಬ ಯಾಕಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ.

ಧರ್ಮಸ್ಥಳ ಪ್ರಕರಣ ವಿಚಾರವನ್ನು ಅನಗತ್ಯವಾಗಿ ಎಳೆದು ಹಿಂದೂಗಳ ಪವಿತ್ರ ಸನ್ನಿಧಿಗೆ ಕೆಟ್ಟ ಹೆಸರು ತಂದರೆ ಸರ್ಕಾರಕ್ಕೆ ಶಾಪ ತಟ್ಟಲಿದೆ. ಮಂಜುನಾಥನ ಶಾಪದಿಂದಲೇ ಈ ಸರ್ಕಾರ ನಾಶವಾಗಲಿದೆ ಎಂದು ಜನಾರ್ಧನ ರೆಡ್ಡಿ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ