ರೌಡಿ ಶೀಟರ್ ಮೇಲೆ ಭೀಕರ ಹಲ್ಲೆ
ರೌಡಿ ಶೀಟರ್ ಮೇಲೆ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದ ಕಮರಿಪೇಟೆಯಲ್ಲಿ ನಡೆದಿದೆ. ರಾಜು ಕಠಾರೆ ಅಲಿಯಾಸ್ ಬೆಂಗಳೂರು ರಾಜಾ ಹಲ್ಲೆಗೆ ಒಳಗಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ರಾಜು ಕಠಾರೆ ಮನೆ ಮುಂದೆ ಇರುವಾಗಲೇ ಕಿರಾತಕರು ಬಂದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಳೆ ದ್ವೇಷ ಹಿನ್ನಲೆಯಲ್ಲಿ ಕಾಂತಾ ಕಠಾರಿ ಎನ್ನುವ ನಿಂದ ದಾಳಿಯಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಸದ್ಯ ರಾಜು ಕಠಾರಿ ಕಿಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಈ ಸಂಬಂಧ ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.