ಸಿಲಿಂಡರ್ ಸ್ಫೋಟಕ್ಕೆ ಹೋಟೆಲ್ ಭಸ್ಮ

ಮಂಗಳವಾರ, 30 ಏಪ್ರಿಲ್ 2019 (17:56 IST)
ಸಿಲಿಂಡರ್ ಸೋರಿಕೆಯಾಗಿ ಹೋಟೆಲ್ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ನಡೆದಿದೆ.

ಹೋಟೆಲ್ ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಇದರ ಪರಿಣಾಮವಾಗಿ ಧಗ ಧಗ ಉರಿದಿದೆ ಹೋಟೆಲ್.

ಕಲಬುರ್ಗಿಯ ರೋಜಾ ಪ್ರದೇಶದಲ್ಲಿ ಘಟನೆ ನಡೆದಿದೆ. ಖ್ವಾಜಾ ಬಂದೇನವಾಜ್ ದರ್ಗಾ ಎದುರಿಗಿರುವ ಹೋಟೆಲ್
ಲಬ್ಬಾಯಿಕ್ ಹೋಟೆಲ್ ನಲ್ಲಿ ದುರ್ಘಟನೆ ಸಂಭವಿಸಿದೆ.

ಹೋಟೆಲ್ ನಲ್ಲಿ ಯಾರೂ ಇಲ್ಲದ ವೇಳೆ ಅವಘಡ ನಡೆದಿದ್ದರಿಂದ  ಭಾರಿ ಅನಾಹುತ ತಪ್ಪಿದಂತಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ ಅಗ್ನಿಶಾಮಕ ದಳ ಸಿಬ್ಬಂದಿ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣ, ವಸ್ತುಗಳು ಸುಟ್ಟು ಕರಕಲಾಗಿವೆ.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ