ಮತ್ತೊಮ್ಮೆ ಹೊಟೇಲ್ ತಿನಿಸು ದರ ಹೆಚ್ಚಾಗುವ ಸಾಧ್ಯತೆ

ಭಾನುವಾರ, 13 ನವೆಂಬರ್ 2022 (16:30 IST)
ಮತ್ತೊಮ್ಮೆ ಹೊಟೇಲ್ ತಿನಿಸು ದರ ಹೆಚ್ಚಾಗುವ ಸಾಧ್ಯತೆ ಇದೆ. ಯಾಕಂದ್ರೆ ಕಮರ್ಷಿಯಲ್ ಗ್ಯಾಸ್ಗಳಿಗೆ ಕೊಡುತ್ತಿದ್ದ ಡಿಸ್ಕೌಂಟ್ ಕಟ್ ಆಗಿದೆ. ಇದರಿಂದ ಹೊಟೇಲ್ ಉದ್ಯಮಿಗಳಿಗೆ ಮತ್ತೆ ಹೊರೆ ಹೆಚ್ಚಾಗಳಿದೆ. ಈ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲೇ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗುವ ಸಾಧ್ಯತೆ ಹೆಚ್ಚಿದೆ. ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಶುರುವಾಗಿದೆ. ಹೋಟೆಲ್ಗಳು ಬಳಸುವ ವಾಣಿಜ್ಯ ಗ್ಯಾಸ್ಗಳನ್ನು ಪೂರೈಸುತ್ತಿದ್ದ ಮೂರು ಕಂಪನಿಗಳು ಹಲವು ರಿಯಾಯತಿಯಲ್ಲಿ ಸಿಲಿಂಡರ್ಗಳನ್ನು ನೀಡುತ್ತಿದ್ದವು ಇದೀಗ ಈ ಡಿಸ್ಕೌಂಟ್ ಕಡಿತಗೊಳಿಸಿರುವ ಪರಿಣಾಮ ಗ್ರಾಹಕರಿಗೆ ಮತ್ತಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ಈ ಹಿಂದೆ ಕಮರ್ಷಿಯಲ್ ಗ್ಯಾಸ್ಗಳಿಗೆ ಕೊಡುತ್ತಿದ್ದ ಡಿಸ್ಕೌಂಟ್ 200 ರಿಂದ 300 ರೂ. ವರೆಗೆ ಇರುತ್ತಿತ್ತು. 50ಕ್ಕಿಂತ ಹೆಚ್ಚು ಸಿಲಿಂಡರ್ಗಳನ್ನು ಪಡೆದರೆ ಒಂದು ರಿಯಾಯಿತಿ. 100ಕ್ಕೆ ಒಂದು ರಿಯಾಯಿತಿ ಹಾಗೂ 200ಕ್ಕೆ ಇನ್ನೊಂದು ರಿಯಾಯಿತಿ ಇತ್ತು. ಆದರೆ ಈಗ ಈ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆದ ಕಾರಣ ಹೋಟೆಲ್ ಉದ್ಯಮಕ್ಕೆ ತೀವ್ರ ಹೊಡೆತ ಬೀಳಲಿದೆ. ಈಗಾಗಲೇ ಅಡುಗೆ ಎಣ್ಣೆ, ತುಪ್ಪ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದರಿಂದ ಹೋಟೆಲ್ ಆಹಾರಗಳ ದರ ಹೆಚ್ಚಳಗೊಂಡಿದೆ. ಇದೀಗ ಮತ್ತೊಮ್ಮೆ ಏರಿಕೆಯಾಗುವ ಲಕ್ಷಣ ಕಂಡುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ