ಹೋಟೆಲ್ ಉದ್ಯಮ ಈಗ ತಾನೇ ಚೇತರಿಸಿಕೊಳ್ತಿತ್ತು. ಆದ್ರೆ ಈಗ ಮತ್ತೆ ಮಳೆಯಿಂದ ಹೊಟೇಲ್ ಉದ್ಯಮದ ಮೇಲೆ ಎಫೆಕ್ಟ್ ಬಿದ್ದಿದೆ. ವಿದ್ಯುತ್ ಸಮಸ್ಯೆಯಿಂದ ಹೋಟೆಲ್ ನಲ್ಲಿರುವ ವಸ್ತುಗಳೆಲ್ಲ ನಾಶವಾಗಿದೆ.ಹೀಗಾಗಿ ಹೊಟೇಲ್ ಉದ್ಯಮಿಗಳು ನಷ್ಟದಲ್ಲಿ ಸಿಲುಕಿ ಒದಾಡುವಂತಾಗಿದೆ.ಕೊರೊನಾ ಹೆಮ್ಮಾರಿಯಿಂದ ಹೊಟೇಲ್ ಉದ್ಯಮ ನಲುಗಿತ್ತು. ಬ್ಯುಸಿನೆಸ್ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ ಹೊಟೇಲ್ ಉದ್ಯಮ ಈಗ ತಾನೇ ಹಂತ ಹಂತವಾಗಿ ಚೇತರಿಕೆ ಕಾಣ್ತಿದೆ.ಆದ್ರೆ ಈಗ ಮತ್ತೆ ಜವರಾಯನಿಂದ ಹೊಟೇಲ್ ಉದ್ಯಮಕ್ಕೆ ಒಡೆತ ಬಿದ್ದಿದೆ. ಮಳೆಯಿಂದ ವಿದ್ಯುತ್ ಕಡಿತವಾಗಿ ಹೊಟೇಲ್ ನ ಫ್ರೀಡ್ಜ್ ನಲ್ಲಿದ್ದ ಆಹಾರ ಪದಾರ್ಥಗಳು ಕೆಟ್ಟಿದೆ.ಜೊತೆಗೆ ಐಸ್ ಕ್ರೀಂ ಸೇರಿದಂತೆ ಎಲ್ಲಾ ಫುಡ್ ಐಟಂ ಗಳು ಅಧ್ವಾನವಾಗಿದೆ.ಹೀಗಾಗಿ ಹೊಟೇಲ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.ಬೆಸ್ಕಾಂ ವಿರುದ್ಧ ಹೋಟೆಲ್ ಮಾಲೀಕರು ಗರಂ ಆಗಿದ್ದಾರೆ.ರಾಜ್ಯದಲ್ಲಿ ಅಗ್ತಿರೋ ನಿರಂತರ ಬೆಳವಣಿಗೆ ಗಮನಿಸಿದರೂ ಜನರಿಗೆ ಮತ್ತಷ್ಟು ಬೆಸ್ಕಾಂ ಹೊರೆಯಾಗಿದೆ .ಕೆಲ ದಿನಗಳಿಂದ ರಾಜ್ಯದಲ್ಲಿ ಭಯಾನಕವಾದ ಮಳೆ ಸುರಿಯುತ್ತಿದೆ .ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ .ಸಾಕಷ್ಟು ಕಡೆ ಮರಗಳು ವಿದ್ಯುತ್ ಕಂಬಗಳು ಟ್ರಾನ್ಸ್ಫಾರ್ಮರ್ ಗಳು ನೆಲಕ್ಕೆ ಬಿದ್ದು ಹಲವಾರು ಅಪಾಯ ಉಂಟು ಮಾಡಿದೆ.ಇದರಿಂದಾಗಿ ಪವರ್ ಸಪ್ಲೈ ಯಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗಿದೆ.ಮತ್ತಷ್ಟು ಕಡೆ ವಿದ್ಯುತ್ ಸರಬರಾಜು ಕೂಡ ಸ್ಥಗಿತಗೊಳಿಸಲಾಗಿದೆ.ಇದರಿಂದ ವ್ಯಾಪಾರ-ವಹಿವಾಟು ಗಳಲ್ಲಿ ಬಹು ದೊಡ್ಡ ಪೆಟ್ಟು ಬಿದ್ದಿದೆ.
ಇದು ಎಷ್ಟು ನ್ಯಾಯ?
ಆದರಿಂದ ಬೆಸ್ಕಾಂ ನಿಂದ ಅಗ್ತೀರೋ ಅವಂತಾರಗಳಿಗೆ ಸೂಕ್ತವಾದ ಪರಿಹಾರ ನೀಡಬೇಕು
ಇನ್ನು ಹೋಟಲ್ ಉದ್ಯಮದಲ್ಲಿ ಇಷ್ಟು ಸಮಸ್ಯೆಯಾಗ್ತಿದ್ರು ಬೆಸ್ಕಾಂ ಮತ್ತಷ್ಟು ಜನರಿಗೆ ಹೊರೆಯಾಗಿದೆ.ಹೋಟೆಲ್ ಉದ್ಯಮ ,ಐಸ್ ಕ್ರೀಮ್ ಪಾರ್ಲರ್, ಬೇಕರಿ ಹಾಗೂ ಸಾಕಷ್ಟು ಕೈಗಾರಿಕೋದ್ಯಮಗಳ ದಿನನಿತ್ಯ ಕೆಲಸಗಳಲ್ಲಿ ಅಡಚಣೆಯಾಗುತ್ತಿದೆ .ಈಗಾಗಲೇ ಎರಡು ಬಾರಿ ವಿದ್ಯುತ್ ದರವನ್ನು ಹೆಚ್ಚಿಸಿ ಮತ್ತೆ ಠೇವಣಿ ದರವನ್ನು ಹೆಚ್ಚು ಮಾಡಲು ಮುಂದಾಗಿದ್ದಾರೆ. ಹೀಗಾಗಿ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿರಾವ್ ಇಂಧನ ಸಚಿವ ಸುನಿಲ್ ಗೆ ಪತ್ರ ಬರೆದು ಸಮಸ್ಯೆ ಬಗೆಹಾರಿಸುವಂತೆ ಮನವಿ ಮಾಡಿದ್ದಾರೆ.ಹೊಟೇಲ್ ಉದ್ಯಮದ ಮೇಲೆ ಒಂದಲ್ಲ ಒಂದು ಪೆಟ್ಟು ಬಿಳ್ತಿದೆ.ಹೀಗಾಗಿ ಹೊಟೇಲ್ ಮಾಲೀಕರು ನಾಳೆ ಬೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಮಾಡಲಿದ್ದಾರೆ