ಫ್ಲೈಓವರ್ ಮೇಲೆ ಬಸ್, ಲಾರಿ ಓಡಾಟ ಯಾವಗ?

ಮಂಗಳವಾರ, 31 ಮೇ 2022 (09:08 IST)
ಬೆಂಗಳೂರು : ರಾಜ್ಯದ 18 ಜಿಲ್ಲೆಗಳನ್ನು ಬೆಂಗಳೂರಿನಿಂದ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆಯಲ್ಲಿ ಮಲ್ಟಿ ವ್ಹೀಲ್ ವೆಹಿಕಲ್ ಹೊರತುಪಡಿಸಿ(ಎಂವಿವಿ) ಬಸ್, ಲಾರಿ ಓಡಾಟಕ್ಕೆ 20 ದಿನದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ.
 
ಫ್ಲೈ ಓವರ್ ಭಾರ ತಡೆಯುವ ಸಾಮರ್ಥ್ಯದ ಸಾಮರ್ಥ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ(ಎನ್ಎಚ್ಎಐ) ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ತಜ್ಞರು ವರದಿ ನೀಡಿದ್ದಾರೆ.

ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಎನ್ಎಚ್ಎಐ ಉನ್ನತ ಅಧಿಕಾರಿಗಳ ತಂಡ ತ್ರಿಸದಸ್ಯ ಸಮಿತಿ ರಚಿಸಿದ್ದು ಸಾಧಕ ಬಾಧಕವನ್ನ ಪರಿಶೀಲಿಸಿ ಮತ್ತೊಂದು ವರದಿ ನೀಡುವಂತೆ ಕೋರಿದೆ.

ಐಐಎಸ್ಸಿಯ ತಜ್ಞ ಚಂದ್ರ ಕಿಶನ್, ಟ್ಯಾಂಡನ್ ಕನ್ಸಲ್ಟೆನ್ಸಿಯ ಬ್ರಿಡ್ಜ್ ಎಂಜಿನಿಯರ್ ದೆಹಲಿಯ ಮಹೇಶ್ ಟೆಂಡನ್, ದೆಹಲಿ ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ನಿವೃತ್ತ ಇಂಜಿನಿಯರ್ ಡಾ. ಶರ್ಮಾ ನೇತೃತ್ವದ ತ್ರಿಸದಸ್ಯ ಸಮಿತಿ ಜೂನ್ ಮೊದಲ ವಾರದಲ್ಲಿ ಎನ್ಎಚ್ಎಐಗೆ ಶಿಫಾರಸು ಇರುವ ವರದಿ ಸಲ್ಲಿಸಲಿದೆ. ಈ ವರದಿಯನ್ನು ಎನ್ಎಚ್ಎಐ ಒಪ್ಪುವ ಸಾಧ್ಯತೆಯಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ