ಚಿಕ್ಕಮಗಳೂರಿನ ತರೀಕೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿಲ್ಲ. ಟಿಕೆಟ್ಗಾಗಿ ಪೈಪೋಟಿ ಆರಂಭವಾಗಿರುವುದರಿಂದ ಟಿಕೆಟ್ ಘೋಷಣೆ ಕಗ್ಗಂಟಾಗಿದೆ. ಈ ಮೂಲಕ ತರೀಕೆರೆ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. ಶ್ರೀನಿವಾಸ್ ಹಾಗೂ ಗೋಪಿಕೃಷ್ಣ ಜಗಳದಲ್ಲಿ ಟಿಕೆಟ್ ಘೋಷಣೆಯಾಗಿಲ್ಲ.. ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭ ಆಗುತ್ತಾ ಎಂಬ ಪ್ರಶ್ನೆ ಮೂಡಿದ್ದು, ಲೋಕೇಶ್ ತಾಳಿಕಟ್ಟೆ ಇದರ ಲಾಭ ಪಡೆದುಕೊಳ್ತಾರಾ ಎಂಬ ಪ್ರಶ್ನೆ ಎದ್ದಿದೆ.. 2ನೇ ಪಟ್ಟಿಯಲ್ಲೂ ಕಾಂಗ್ರೆಸ್ ಹೈಕಮಾಂಡ್ ತರೀಕೆರೆ ಟಿಕೆಟ್ ಘೋಷಿಸಿಲ್ಲ.. ಸ್ಕ್ರೀನಿಂಗ್ ಕಮಿಟಿ AICCಗೆ ಶ್ರೀನಿವಾಸ್, ಗೋಪಿಕೃಷ್ಣ ಮತ್ತು ಲೋಕೇಶ್ ತಾಳಿಕಟ್ಟೆ ಮೂವರ ಹೆಸರನ್ನು ಶಿಫಾರಸು ಮಾಡಿದೆ.. ವಿಪಕ್ಷ ನಾಯಕ ಸಿದ್ದರಾಮಯ್ಯ, KPCC ಅಧ್ಯಕ್ಷ D.K. ಶಿವಕುಮಾರ್, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ 3 ಬಣದಲ್ಲಿ ಲೋಕೇಶ್ ತಾಳಿಕಟ್ಟೆ ಗುರುತಿಸಿಕೊಂಡಿದ್ದಾರೆ.. ಶ್ರೀನಿವಾಸ್ ಹಾಗೂ ಗೋಪಿಕೃಷ್ಣ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ರೆ ಬಂಡಾಯವೇಳುವ ಸಾಧ್ಯತೆ ಹಿನ್ನೆಲೆಯಲ್ಲಿ ಲೋಕೇಶ್ ತಾಳಿಕಟ್ಟೆಗೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ