ಯಲಹಂಕ ಜನರ ಲೆಕ್ಕಾಚಾರವನ್ನೇ ಬದಲಾಗಿದ್ದು ಹೇಗೆ ಗೊತ್ತಾ?

ಮಂಗಳವಾರ, 15 ಮೇ 2018 (13:13 IST)
ಈ ಸಲದ ಕರ್ನಾಟಕ ಚುನಾವಣೆ ಹಿಂದೆಂದಿಗಿಂತಲೂ ಟಫ್ ಅಗಿತ್ತು. ಗೆಲುವು ಸೋಲಿನ ಲೆಕ್ಕಾಚಾರಗಳು ಜೋರಾಗಿದ್ದವು. ಅಂಥಾ ಕಠಿಣ ಸ್ಪರ್ಧೆ ಬೆಂಗಳೂರಿನ ಯಲಹಂಕ ಕ್ಷೇತ್ರದಲ್ಲೂ ಇತ್ತು. ಆದ್ರೆ ಅಂತಿಮವಾಗಿ ಜನ ಬೆಂಬಲ ಸಿಕ್ಕಿದ್ದು ಎಸ್.ಆರ್.ವಿಶ್ವನಾಥ್ ಗೆ.
ಎಸ್.ಆರ್.ವಿಶ್ವನಾಥ್. ಬಿಜೆಪಿ ನಾಯಕರಾಗಿದ್ದು ಕಳೆದ 10 ವರ್ಷಗಳಿಂದ ಯಲಹಂಕ ಶಾಸಕರಾಗಿದ್ದಾರೆ. ಇದೀಗ ಮೂರನೇ ಬಾರಿ ಗೆದ್ದಿದ್ದು ಅದಕ್ಕೆ ಕಾರಣ ಇವರು ಮಾಡಿದಂಥಾ  ಜನಪರ ಕೆಲಸಗಳು. ಎಸ್.ಆರ್.ವಿಶ್ವನಾಥ್ ಶಾಸಕರಾದ ನಂತರ ಯಲಹಂಕ ಕ್ಷೇತ್ರ ಹೇಗೆ ಬದಲಾಗಿದೆ ಅನ್ನೋದಕ್ಕೆ ಇದೊಂದು ವಿಡಿಯೋ ಸಾಕ್ಷಿಯಾಗಿತ್ತು.
 
ಚುನಾವಣೆ ಸಮಯದಲ್ಲಿ ಈ ವಿಡಿಯೋ ಯಲಹಂಕ ಜನರನ್ನು ತಲುಪಿದ್ದು, ಕಳೆದ 10 ವರ್ಷಗಳಲ್ಲಿ ಯಲಹಂಕ ಹೇಗಿತ್ತು. ಈಗ ಹೇಗಾಗಿದೆ ಅನ್ನೋದನ್ನ ಸ್ಪಷ್ಟವಾಗಿ ತೋರಿಸಿತ್ತು. ಅದರಲ್ಲೂ ಜನರೇ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುವಂತೆ ಮಾಡಿತ್ತು ಈ ವಿಡಿಯೋ. 
ನೋಡ ನೋಡ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ, ಯಲಹಂದ ಕ್ಷೇತ್ರದಲ್ಲಿನ ಲಕ್ಷಾಂತರ ಜನರನ್ನು ತಲುಪಿತ್ತು. ಯಲಹಂಕದಲ್ಲಿ ಎಸ್.ಆರ್.ವಿಶ್ವನಾಥ್ ಏನೇನ್ ಮಾಡಿದ್ದಾರೆ ಅನ್ನೋದನ್ನ ಈ ವಿಡಿಯೋ ಅದ್ಭುತವಾಗಿ ಕಟ್ಟಿ ಕೊಟ್ಟಿತ್ತು. ಇದು ಮತದಾರರನ್ನು ವಿಶ್ವನಾಥ್ ಕಡೆ ವಾಲುವಂತೆ ಮಾಡಿತ್ತು.
 
ಎರಡು ಬಾರಿ ಗೆಲುವು ಸಾಧಿಸಿದ್ದ ಎಸ್.ಆರ್.ವಿಶ್ವನಾಥ್ ಗೆ ಮೂರನೇ ಬಾರಿ ಗೆಲ್ಲುವುದು ಕಷ್ಟವೇನೂ ಆಗಿರಲಿಲ್ಲ. ಆದರೆ ಜೆಡಿಎಸ್ ವತಿಯಿಂದ ಹನುಮಂತೇಗೌಡ ಕಣಕ್ಕಿಳಿದಿದ್ದು ಸ್ವಲ್ಪ ಮಟ್ಟಿನ ಸಂಚಲನ ಮೂಡಿಸಿತ್ತು. ಇದರ ಜೊತೆಗೆ ಕಾಂಗ್ರೆಸ್ ನಾಯಕರು ಬಿಜೆಪಿಯ ವೈಫಲ್ಯಗಳನ್ನು ಎತ್ತಿ ತೋರಿಸುವಂಥಾ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಯ ಬಿಟ್ಟಿದ್ದರು. ಆ ವಿಡಿಯೋಗಳ ಮೂಲಕ ಎಸ್.ಆರ್.ವಿಶ್ವನಾಥ್ ಮೇಲಿನ ವಿಶ್ವಾಸ ಕುಗ್ಗುವಂತೆ ಮಾಡುವ ಯತ್ನ ನಡೆಯಿತು. ಆದರೆ ಅದೇ ಸಮಯಕ್ಕೆ ಜನರನ್ನು ತಲುಪಿತ್ತು ಒಂದು ವಿಡಿಯೋ. 10 ವರ್ಷಗಳ ಹಿಂದೆ ಯಲಹಂಕ ಹೇಗಿತ್ತು? ಈಗ ಹೇಗಿದೆ ಎಂಬುದು ಆ ವಿಡಿಯೋ ಸ್ಪಷ್ಟವಾಗಿ ಬಿಚ್ಚಿಟ್ಟಿತ್ತು. ಎದುರಾಳಿಗಳು ಹರಿಯ ಬಿಟ್ಟ ವಿಡಿಯೋಗಳಿಂದ ಸ್ವಲ್ಪ ಜನ ವಿಚಲಿತರಾಗಿ ಬೇರೆಯವರಿಗೆ ಓಟ್ ಹಾಕಬೇಕು ಎಂದುಕೊಂಡಿದ್ದವರು ಮತ್ತೆ ವಿಶ್ವನಾಥ್ ಕಡೆ ವಾಲಿದರು. ಇದರ ಪರಿಣಾಮ ಎಸ್.ಆರ್.ವಿಶ್ವನಾಥ್ ಮೂರನೇ ಬಾರಿ ಗೆಲುವು ಸಾಧಿಸಿದ್ದಾರೆ. ಒಂದು ವಿಡಿಯೋ ಕೊನೇ ಕ್ಷಣದಲ್ಲಿ ಹೇಗೆ ಜನರ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ