ಹಲ್ಲೆಗೊಳಗಾದ ಯೋಧನ ಮನೆಗೆ ಭೇಟಿ ನೀಡಿದ ಸಚಿವ ಮಾಡಿದ್ದೇನು?

ಗುರುವಾರ, 7 ಮಾರ್ಚ್ 2019 (16:10 IST)
ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆಗೊಳಗಾಗಿದ್ದ ನಿವೃತ್ತ CRPF ಯೋಧನ ಮನೆಗೆ ಸಚಿವರು ಭೇಟಿ ನೀಡಿದರು.

ಪರಮೇಶ್ವರಪ್ಪ ಬಾರಂಗಿ ಮನೆಗೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ರು. ಬ್ಯಾಡಗಿ ತಾಲೂಕಿನ ಕುಮ್ಮೂರು ಗ್ರಾಮದ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ಮಾತನಾಡಿದ ಸಚಿವರು ಹಲ್ಲೆಗೊಳಗಾದ ಯೋಧನಿಗೆ ಬೆಂಗಳೂರು ವಿಕ್ರಂ ಆಸ್ಪತ್ರೆಯಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ಕೊಡಿಸುತ್ತೇನೆ. ಪೊಲೀಸ್ ಅಥವಾ ಮೆಟ್ರೊ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ರು. ತಪ್ಪಿತಸ್ಥರಿಗೆ ಈಗಾಗಲೇ ಜೈಲು ಶಿಕ್ಷೆಯಾಗಿದೆ. ಈ ತರಹದ ಘಟನೆ ನಡೆದಿದ್ದು ತಪ್ಪು, ಇದಕ್ಕೆ ರಾಜಕೀಯ ಅಥವಾ ಕೋಮು ಭಾವನೆ ಬೆರೆಸುವುದು ಬೇಡ ಎಂದು ತಿಳಿಸಿದ್ರು. ಇನ್ನೂ ಲೋಕಸಭಾ ಚುನಾವಣೆ ವಿಷಯವಾಗಿ ಮಾತನಾಡಿದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವನಾಗಿ ನನಗೆ ಇಲ್ಲಿಯ ಎಮ್ ಪಿ ಹೆಸರು ಗೊತ್ತಿಲ್ಲ, ಇಲ್ಲಿಯ ಜನಸಾಮಾನ್ಯರು ಎಮ್ ಪಿ ಎಲ್ಲಿದ್ದಾರೆ ಅಂತಾ ಕೇಳುತ್ತಿದ್ದಾರೆ ಎಂದ್ರು. 

ಕಳೆದ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಲೀಂ ಅಹಮದ್ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬದಲಾವಣೆ ಬೇಕು ಅಂತಾ ಜನ ಭಾವಿಸುತ್ತಿದ್ದಾರೆ ಎಂದ್ರು. ಮೋದಿ ಹವಾದಲ್ಲಿ ಕಳೆದ ಬಾರಿ ಸಂಸದ ಶಿವಕುಮಾರ ಉದಾಸಿ ಗೆದ್ದಿದ್ದಾರೆ. ಈಗ ಮೋದಿ ಹವಾ ಹೋಗಿ ಎರಡು ವರ್ಷವಾಯಿತು. ಇನ್ನೂ ಮೋದಿ ಪ್ರಧಾನಿ ಆದಾಗ ಆಚ್ಚೆ ದಿನ್ ಆಯೇಗಾ ಅಂದ್ರು. ಆದ್ರೆ ಒಳ್ಳೆ ದಿನ ಬಂದಿದ್ದು ದೇಶಕ್ಕಲ್ಲ ಮೋದಿಯ ಹತ್ತು ಲಕ್ಷದ ಕೋಟ್ ಹಾಕಿದರಲ್ಲ ಅವರಿಗೆ ಒಳ್ಳೆಯ ದಿನ ಬಂತು ಎಂದ್ರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ