ಹಿಂದೂಗಳು ದನದ ಮೂತ್ರ ಕುಡಿಯುವವರು-ಪಾಕ್ ಸಚಿವನ ವಿವಾದಾತ್ಮಕ ಹೇಳಿಕೆ
ಬುಧವಾರ, 6 ಮಾರ್ಚ್ 2019 (12:18 IST)
ಲಾಹೋರ್ : ಪಾಕಿಸ್ತಾನದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಫಯ್ಯಜುಲ್ ಹಸನ್ ಅವರು ಹಿಂದೂಗಳನ್ನುದನದ ಮೂತ್ರ ಕುಡಿಯುವ ಜನರು ಎಂದು ಹೇಳಿಕೆ ನೀಡುವುದರ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ಕಳೆದ ತಿಂಗಳು ಸುದ್ದಿಗೋಷ್ಠಿ ನಡೆಸಿದ್ದ ಹಸನ್, ದನದ ಮೂತ್ರ ಸೇವಿಸುವವರು ಎಂದು ಹಿಂದು ವಿರೋಧಿ ಹೇಳಿಕೆ ನೀಡಿದ್ದರು. ಅಲ್ಲದೇ ನಾವು ಮುಸ್ಲಿಮರು. ನಮಗೆ ಧ್ವಜವಿದೆ. ಮೌಲಾಅಲಿಯಾಳ ಶೌರ್ಯದ ಹಾಗೂ ಹಜರತ್ ಉಮಾರಳ ಶೌರ್ಯದ ಧ್ವಜವಿದೆ. ನಿಮ್ಮ ಬಳಿ ಆ ಧ್ವಜವಿಲ್ಲ. ಆದ್ದರಿಂದ ನಮಗಿಂತ ನೀವು ಏಳುಪಟ್ಟು ಉತ್ತಮ ಎಂಬ ಭ್ರಮೆಯಡಿಯಲ್ಲಿ ಕಾರ್ಯನಿರ್ವಹಿಸಬೇಡಿ ಎಂದು ಹೇಳಿದ್ದರು.
ಈ ವಿಡಿಯೋ ವೈರಲ್ ಆಗಿದ್ದು, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾಂತರು ಸಚಿವರ ಹಿಂದೂ ವಿರೋಧಿ ಟೀಕೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುಮಾಡಿದ್ದಾರೆ. ಅಲ್ಲದೇ ಇದೀಗ ಹಸನ್ ರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ತೀವ್ರ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಂಜಾಬ್ ಪ್ರಾಂತ್ಯದ ಸಿಎಂ ಉಸ್ಮಾನ್ ಬುಜ್ವಾರ್ ಗೆ ಹಸನ್ ರನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಆದೇಶಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.