ಖರ್ಗೆ ಆರಿದ ದೀಪ - ಮೋದಿ ಎಷ್ಟು ವೋಲ್ಟೇಜ್ ಬಲ್ಪ್?

ಭಾನುವಾರ, 9 ಫೆಬ್ರವರಿ 2020 (15:19 IST)
ನರೇಂದ್ರ ಮೋದಿ ಜೀರೋ ಕ್ಯಾಂಡಲ್ ಬಲ್ಪ್. ಹೀಗಂತ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದೇ ತಡ, ಈ ಕುರಿತು ವಾಗ್ಯುದ್ಧ ಜೋರಾಗಿ ನಡೆಯುತ್ತಿದೆ.

ಪ್ರಧಾನಿ ಮೋದಿಯವರು ಏನು? ಅವರ ಸಾಧನೆ ಏನು? ಅವರ ಪ್ರಕಾಶ ಜಗತ್ತಿಗೆ ಬೆಳಕು ಕೊಡುತ್ತಿದೆ.
‌ನರೇಂದ್ರ ಮೋದಿಯವರು ತೌಸಂಡ್ ವೋಲ್ಟಿನ ಲೈಟ್. ಖರ್ಗೆ ರಾಜಕೀಯವಾಗಿ ಆರಿದ ದೀಪ. ಕತ್ತಲಲ್ಲಿದ್ದಾರೆ, ಸೋತಿದ್ದಾರೆ. ಹೀಗಂತ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಖರ್ಗೆಯವರನ್ನು ಕಾಂಗ್ರೆಸ್ ನವರು ಕನಿಷ್ಠ ರಾಜ್ಯಸಭೆ, ವಿಧಾನ ಪರಿಷತ್ ಗೂ ಕಳಿಸಲಿಲ್ಲ. ಆ ದುಖಃದಲ್ಲಿ ಖರ್ಗೆಯವರು ಆ ಮಾತು ಹೇಳಿದ್ದಾರೆ ಎಂದಿದ್ದಾರೆ.

ಇನ್ನು, ಬಿಜೆಪಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಎಂಬ HD ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ಬ್ರಿಟೀಷರು ಈ ದೇಶದಲ್ಲಿ ಡಿವೈಡ್ ಅಂಡ್ ರೂಲ್ ಮಾಡಿದ್ದರು. ದೇಶದಲ್ಲಿ ಆಡಳಿತ ಉಳಿಸಬೇಕು ಎಂದು ಹಿಂದೂ ಮುಸ್ಲಿಂರಲ್ಲಿ ಬೇಧ ಭಾವ ತಂದ್ರು. ಬಳಿಕ ಅದನ್ನು ಕಾಂಗ್ರೆಸ್ ಮುಂದುವರೆಸಿತು. ಕಾಂಗ್ರೆಸ್ ನ ಇನ್ನೊಂದು ಮುಖವೇ ದೇವೇಗೌಡರು ಅಂತ ಟೀಕೆ ಮಾಡಿದ್ದಾರೆ.

ದೇವೇಗೌಡರಿಗೆ ದೇಶದ ಸಂವಿಧಾನದ ಬಗ್ಗೆ ನಂಬಿಕೆ‌ ಇಲ್ಲ. ಬಿಜೆಪಿ ಸಂವಿಧಾನದ ಮೇಲೆ‌ಗೌರವ ಇಟ್ಟು ಅಂಬೇಡ್ಕರ್ ಗೆ ಗೌರವ ನೀಡುತ್ತಿದೆ. ನಮ್ಮಲ್ಲಿ ಭಾರಾತ್ ಮಾತಾಕಿ‌ ಜೈ ಇದೆಯೇ ಹೊರತು‌ ವ್ಯಕ್ತಿ ಆಧಾರಿತ ಇಲ್ಲ. ಜೆಡಿಎಸ್ ನಲ್ಲಿ ಈ ವರೆಗೆ ಭಾರತ್ ಮಾತಾ ಕಿ  ಜೈ ಅಂತ ‌ಹೇಳಿಲ್ಲ, ರಾಷ್ಟ್ರ ಧ್ವಜ ಹಾರಿಸಿಲ್ಲ ಅಂತ ದೂರಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ