ಟೀಂ ಇಂಡಿಯಾ ಸೋತ ಬೆನ್ನಲ್ಲೇ ಟ್ರೆಂಡ್ ಆದ ಧೋನಿ!

ಭಾನುವಾರ, 9 ಫೆಬ್ರವರಿ 2020 (09:28 IST)
ರಾಂಚಿ: ಟೀಂ ಇಂಡಿಯಾ ಪಂದ್ಯ ಸೋತಾಗಲೆಲ್ಲಾ ಅಭಿಮಾನಿಗಳಿಗೆ ಧೋನಿಯ ನೆನಪಾಗುತ್ತದೆ. ಹಿರಿಯ ವಿಕೆಟ್ ಕೀಪರ್ ಧೋನಿ ಕ್ರಿಕೆಟ್ ಅಂಗಣದಲ್ಲಿ ಕಾಣಿಸಿಕೊಳ್ಳದೇ ಎಷ್ಟೋ ಸಮಯವಾಯಿತು.


ಹಾಗಿದ್ದರೂ ಧೋನಿ ಮೇಲಿನ ಅಭಿಮಾನಿಗಳ ಪ್ರೀತಿ ಕಡಿಮೆಯಾಗಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನ್ಯೂಜಿಲೆಂಢ್ ವಿರುದ್ಧ ಟೀಂ ಇಂಡಿಯಾ ಏಕದಿನ ಸರಣಿ ಸೋತ ಬಳಿಕ ಮತ್ತೆ ಟ್ವಿಟರ್ ನಲ್ಲಿ ಅಭಿಮಾನಿಗಳು ಧೋನಿ ಹೆಸರನ್ನು ಟ್ರೆಂಡ್ ಮಾಡಿಕೊಂಡಿದ್ದಾರೆ.

ಧೋನಿ ಕಮ್ ಬ್ಯಾಕ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಮತ್ತೆ ಹಳೆಯ ಹುಲಿಗಾಗಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಅದೇನೇ ಇದ್ದರೂ ಧೋನಿ ಮಾತ್ರ ಮತ್ತೆ ಟೀಂ ಇಂಡಿಯಾಕ್ಕೆ ಬರುವ ಮನಸ್ಸೇ ಮಾಡುವಂತೆ ಕಾಣುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ