10 ವರ್ಷದೊಳಗಿನ ಮಕ್ಕಳು ಕೊರೋನಾದಿಂದ ರಕ್ಷಿಸುವುದು ಹೇಗೆ?

ಭಾನುವಾರ, 9 ಮೇ 2021 (09:00 IST)
ಬೆಂಗಳೂರು: ಕೊರೋನಾ ಬಂದರೆ 10 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುವ ಪೋಷಕರು ಈ ಮುನ್ನೆಚ್ಚರಿಕೆ ಕೈಗೊಳ್ಳುವುದು ಉತ್ತಮ.


ಕೆಲವು ದಿನಗಳ ಮಟ್ಟಿಗೆ ನಿಮ್ಮ ಮಕ್ಕಳನ್ನು ಹೊರಗೆ, ನೆರೆಹೊರೆಯವರೊಂದಿಗೆ ಆಟವಾಡಲು ಬಿಡಬೇಡಿ. ಕೆಲವರು ಚಿಕ್ಕಮಕ್ಕಳನ್ನು ಕಂಡ ಕೂಡಲೇ ಮುದ್ದು ಮಾಡುವುದು, ಚುಂಬಿಸುವುದು ಇತ್ಯಾದಿ ಮಾಡಲು ಹೋಗುತ್ತಾರೆ. ಯಾರಿಗೂ ಈ ರೀತಿ ಮಾಡಲು ಅವಕಾಶ ಕೊಡಬೇಡಿ.

ಸದ್ಯಕ್ಕೆ ಮಕ್ಕಳ ಕೂದಲು ಕತ್ತರಿಸಲು ಬ್ಯೂಟಿ ಪಾರ್ಲರ್ ಗಳಿಗೆ ಹೋಗದೇ ಇರುವುದೇ ಉತ್ತಮ. ಆಗಾಗ ಕೈ ತೊಳೆಯುವುದು, ಮಾಸ್ಕ್ ಹಾಕುವುದನ್ನು ಅಭ್ಯಾಸ ಮಾಡಿಸಿ. ಎದೆ ಹಾಲು ಕುಡಿಯುವ ಶಿಶುಗಳಿದ್ದರೆ ಅಂತಹ ಪೋಷಕರು ಆದಷ್ಟು ಮನೆಯೊಳಗೇ ಇರಿ. ಹೊರಗಿನ ಆಹಾರ, ಚಾಕಲೇಟ್, ಬಿಸ್ಕತ್ ಗಳನ್ನು ಖರೀದಿಸಲು ಹೋಗಬೇಡಿ. ಏನೇ ಆರೋಗ್ಯದಲ್ಲಿ ಏರುಪೇರಾದರೂ ತಕ್ಷಣವೇ ಆರೋಗ್ಯಾಧಿಕಾರಿಗಳ ಸಲಹೆ ಪಡೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ