ಆಕ್ಸಿಜನ್ ಸಿಲಿಂಡರ್ ಖರೀದಿ ವ್ಯವಹಾರ: ವಿವಾದಕ್ಕೀಡಾದ ಸುಮಲತಾ ಅಂಬರೀಶ್

ಶನಿವಾರ, 8 ಮೇ 2021 (10:22 IST)
ಮಂಡ್ಯ: ಸರ್ಕಾರಿ ಆಸ್ಪತ್ರೆಗೆ ಸ್ವಂತ ಖರ್ಚಿನಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಓಡಾಡುತ್ತಿತ್ತು. ಆದರೆ ಅದೀಗ ವಿವಾದದಲ್ಲಿದೆ.


ಸುಮಲತಾ ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಸಿಲಿಂಡರ್ ಖರೀದಿಸಿಲ್ಲ. ಬದಲಾಗಿ ಸರ್ಕಾರದಿಂದ ಮಂಜೂರಾದ ಆಕ್ಸಿಜನ್ ಗಳನ್ನೇ ನೀಡಿ ತಾವು ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ದಿನವೊಂದಕ್ಕೆ 3,000 ಲೀ. ಆಕ್ಸಿಜನ್ ಅಗತ್ಯವಿದೆ. ಈ ವರ್ಷ ಎಂ.ಪಿ ಫಂಡ್ ಮುಗಿದ ಹಿನ್ನಲೆಯಲ್ಲಿ ಸ್ವಂತ ಖರ್ಚಿನಿಂದಲೇ ವ್ಯವಸ್ಥೆ ಮಾಡಿರುವುದಾಗಿ ಸುಮಲತಾ ಹೇಳಿದ್ದರು. ಆದರೆ ಇದೆಲ್ಲಾ ಪ್ರಚಾರಕ್ಕಾಗಿ ಹೇಳಿರುವ ಸುಳ್ಳು ಎಂಬುದು ಜೆಡಿಎಸ್ ನಾಯಕರ ಆರೋಪ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ