HMPV ವೈರಸ್ ಇದೆಯೇ ಎಂದು ಸುಲಭವಾಗಿ ಟೆಸ್ಟ್ ಮಾಡುವುದು ಹೇಗೆ ಇಲ್ಲಿ ನೋಡಿ

Krishnaveni K

ಮಂಗಳವಾರ, 7 ಜನವರಿ 2025 (09:30 IST)
ಬೆಂಗಳೂರು: ಚೀನಾದಲ್ಲಿ ಅಬ್ಬರಿಸಿದ ಎಚ್ಎಂಪಿವಿ ವೈರಸ್ ಈಗ ಭಾರತಕ್ಕೂ ವ್ಯಾಪಿಸಿದೆ. ಹಾಗಾದರೆ ಎಚ್ಎಂಪಿವಿ ವೈರಸ್ ತಗುಲಿದೆಯೇ ಎಂದು ತಿಳಿಯುವುದು ಹೇಗೆ? ಇಲ್ಲಿ ನೋಡಿ.

ಕೊರೋನಾ ಬಳಿಕ ಜನರಲ್ಲಿ ಆತಂಕ ಮೂಡಿಸಿರುವ ಎಚ್ಎಂಪಿವಿ ವೈರಸ್ ಅಷ್ಟು ಮಾರಾಣಾಂತಿಕವಲ್ಲ ಎನಿಸಿದರೂ ದುರ್ಬಲ ರೋಗ ನಿರೋಧಕ ಶಕ್ತಿಯಿರುವವರಿಗೆ ಅಪಾಯಕಾರಿಯೇ ಎನ್ನಬಹುದು. ಸಾಮಾನ್ಯ ಶೀತ, ಕೆಮ್ಮು, ಕಫದ ಲಕ್ಷಣವನ್ನೇ ಇದೂ ಹೊಂದಿರುತ್ತದೆ. ಆದರೂ ಉಸಿರಾಟದ ಸಮಸ್ಯೆ ಬಂದರೆ ಎಚ್ಚರಿಕೆ ವಹಿಸಬೇಕಾಗುತ್ತದೆ. ತಕ್ಷಣವೇ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಎಚ್ಎಂಪಿವಿ ಪರೀಕ್ಷಿಸಲು ಯಾವೆಲ್ಲಾ ಟೆಸ್ಟ್ ಗಳಿವೆ
ಹಾಗಿದ್ದರೂ ಎಚ್ಎಂಪಿವಿ ಇದೆಯೇ ಎಂದು ತಿಳಿಯಲು ಈ ಹಿಂದೆ ಕೊರೋನಾಗೆ ಮಾಡಿಸಿದಂತೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿದರೂ ಸಾಕು. ಇಲ್ಲದೇ ಪಿಸಿಆರ್ ಟೆಸ್ಟ್ ಮುಖಾಂತರ ಉಸಿರಾಟದ ಸೋಂಕಿನ ತಳಿ ಯಾವುದು ಎಂದು ಪತ್ತೆ ಮಾಡಬಹುದು. ಇಲ್ಲವೇ ಕೊರೋನಾಗೆ ಮಾಡಿಸಿದಂತೆ ಆಂಟಿಜೆನ್ ಟೆಸ್ಟ್ ಮುಖಾಂತರ ಪರೀಕ್ಷಿಸಬಹುದು. ಆದರೆ ಆಂಟಿಜೆನ್ ಟೆಸ್ಟ್ ಆರಂಭಿಕ ಲಕ್ಷಣಗಳನ್ನು ಗುರುತಿಸುವಲ್ಲಿ ವಿಫಲವಾಗಬಹುದು. ಇವುಗಳ ಪೈಕಿ ಆರ್ ಟಿಪಿಸಿಆರ್ ಅಥವಾ ಪಿಸಿಆರ್ ಟೆಸ್ಟ್ ಪರಿಣಾಮಕಾರಿಯಾಗಿದೆ.

ಯಾವಾಗ ಪರೀಕ್ಷಿಸಬೇಕು?
ಸಾಮಾನ್ಯ ಶೀತ ಬಂದಾಗಲೂ ಎಚ್ಎಂಪಿವಿ ವೈರಸ್ ಎಂದು ಭಯಪಡಬೇಕಾಗಿಲ್ಲ. ಶೀತ, ಕೆಮ್ಮು, ಕಫದ ಜೊತೆಗೆ ಹಿಂದೆಂದೂ ಇಲ್ಲದೇ ಇದ್ದರೂ ಈಗ ಉಸಿರಾಟದ ಸಮಸ್ಯೆ ಕಂಡುಬರುತ್ತಿದ್ದರೆ, ಮೂಗು ಕಟ್ಟಿದಂತಾಗುತ್ತಿದ್ದರೆ, ಗಂಟಲು ನೋವು ಬರುತ್ತಿದ್ದು, ಉಸಿರಾಡಲು ಕಷ್ಟವಾಗುತ್ತಿದ್ದರೆ ಎಚ್ಎಂಪಿವಿ ವೈರಸ್ ಪರೀಕ್ಷೆ ಮಾಡಿಸಿಕೊಂಡರೆ ಸಾಕು. ಈಗಾಗಲೇ ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕೆ ಇರಲಿ ಆದರೆ ಆತಂಕ ಬೇಡ ಎಂದು ಅಭಯ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ