ಬೆಂಗಳೂರು: ಕೊರೋನಾವೈರಸ್ ತಡೆಯಲು ಲಾಕ್ ಡೌನ್ ಮಾಡಿರುವುದರಿಂದ ದೇಶದಲ್ಲಿ ಆರ್ಥಿಕ ಕುಸಿತವಾಗುವುದು ನಿರೀಕ್ಷಿತ. ಜತೆಗೆ ಬಡವರು ದಿನನಿತ್ಯದ ಆಹಾರಕ್ಕೆ ಪರದಾಡಲಿದ್ದಾರೆ. ಇದೆಲ್ಲದರ ಜತೆಗೆ ಕೊರೋನಾ ತಡೆಗೆ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಬೇಕಿದೆ.
ಈ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜತೆ ನೀವೂ ಕೈ ಜೋಡಿಸಬಹುದಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡುವ ಮೂಲಕ ಪರಿಹಾರ ಕಾರ್ಯಕ್ಕೆ ನೆರವಾಗಬಹುದು.
ಇದು ನಿಮಗೆ ಕಷ್ಟವೆನಿಸಿದರೆ ನಿಮ್ಮ ಸುತ್ತಮುತ್ತಲು ಇರುವ ಬಡ, ಕೂಲಿ ಕಾರ್ಮಿಕರ ಕುಟುಂಬಕ್ಕೆ ನೀವು ಮಾಡುವ ಆಹಾರದಲ್ಲಿ ಕೊಂಚ ದಾನ ಮಾಡಿ ನೆರವಾಗಬಹುದು. ಅಥವಾ ಅವರಿಗೆ ಅಗತ್ಯ ವಸ್ತುಗಳನ್ನು ನೀಡುವುದರ ಮೂಲಕ, ಮಾಸ್ಕ್, ಸ್ಯಾನಿಟೈಸರ್ ನೀಡುವ ಮೂಲಕ ಸಮಾಜ ಸೇವೆ ಮಾಡಬಹುದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನೀವು ಮಾಡುವ ಸಣ್ಣ ಸಹಾಯವೂ ದೊಡ್ಡದೆನಿಸಲಿದೆ.