ಕೊರೋನಾದಿಂದ ಸಂತ್ರಸ್ತರಾದವರಿಗೆ ಗಂಗೂಲಿ ನೀಡಲಿದ್ದಾರೆ 50 ಲಕ್ಷ ರೂ. ಪರಿಹಾರ

ಗುರುವಾರ, 26 ಮಾರ್ಚ್ 2020 (09:48 IST)
ಮುಂಬೈ: ಕೊರೋನಾವೈರಸ್ ನಿಂದಾಗಿ ದೇಶದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೀಡಾದವರು ಬಡ ವರ್ಗದವರು. ಅವರಿಗೆ ಈಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೆರವು ನೀಡಲು ಮುಂದಾಗಿದ್ದಾರೆ.


ಪಶ್ಚಿಮ ಬಂಗಾಲದಲ್ಲಿ ಕೊರೋನಾದಿಂದ ರಕ್ಷಿಸಿಕೊಳ್ಳಲು ಬಡವರ್ಗದವರನ್ನು ಸರ್ಕಾರಿ ಶಾಲೆಗಳಲ್ಲಿ ಇರಿಸಲಾಗಿದೆ. ಇವರಿಗೆ ಅಗತ್ಯ ದಿನಸಿ ಒದಗಿಸಲು ಗಂಗೂಲಿ 50 ಲಕ್ಷ ರೂ. ನೆರವು ನೀಡಲಿದ್ದಾರೆ ಎಂದು ಪಶ್ಚಿಮ ಬಂಗಾಲ ಕ್ರಿಕೆಟ್ ಅಸೋಸಿಯೇಷನ್ ಪ್ರಕಟಿಸಿದೆ.

ಗಂಗೂಲಿಯ ಈ ನಡೆ ಇತರರಿಗೂ ಸ್ಪೂರ್ತಿಯಾಗಲಿದೆ ಎಂದು ಕ್ರಿಕೆಟ್ ಸಂಸ್ಥೆ ಹೇಳಿದೆ. ದೇಶ ಸಂಪೂರ್ಣವಾಗಿ ಲಾಕ್ ಡೌನ್ ಆಗಿರುವುದರಿಂದ ಬಡವರ್ಗದವರು ನಿತ್ಯದ ಊಟಕ್ಕಾಗಿ ಪರದಾಡುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ