ರಾಜ್ಯದಲ್ಲಿ "ಡಸ್ಟ್ ಸಿಟಿ" ಪಟ್ಟ ಹುಬ್ಬಳ್ಳಿಗೆ..!!!

ಶುಕ್ರವಾರ, 1 ಏಪ್ರಿಲ್ 2022 (14:07 IST)
ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ, ರಸ್ತೆ ಅಗಲೀಕರಣ, ಅರ್ಧಕ್ಕೆ ನಿಂತಿರುವ ಹಲವು ಕಾಮಗಾರಿ ಕೆಲಸವೇ ಈ ರೀತಿಯ ಹೊಸ ಬಿರುದು ಬರುವುದಕ್ಕೆ ಕಾರಣವಾಗಿದೆ ಅನ್ನೋದು ಸ್ಥಳೀಯರ ಆರೋಪವಾಗಿದೆ. ಸಿಟಿಯನ್ನ ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗ್ತೀವಿ, ನಗರವನ್ನ ಸ್ಮಾರ್ಟ್ ಸಿಟಿ ಮಾಡ್ತೀವಿ ಅಂತಾ ಹೇಳುತ್ತಿದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ..
ವಾಣಿಜ್ಯ ನಗರಿ, ಛೋಟಾ ಮುಂಬೈ, ಗಂಡು ಮೆಟ್ಟಿದ ನಾಡು ಅಂತೆಲ್ಲಾ ಕರೆಸಿಕೊಳ್ಳುವ ನಗರ ಇದೀಗ 'ಡಸ್ಟ್ ಸಿಟಿ' ಎಂದು ಕರೆಸಿಕೊಳ್ಳುವುದಕ್ಕೆ ಸಿದ್ಧವಾಗಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದ ಕಾಮಗಾರಿಗಳು, ರಸ್ತೆ ಅಗಲೀಕರಣದಿಂದ ಇಂದು ಸ್ಮಾರ್ಟ್ ಸಿಟಿಗೆ ಡಸ್ಟ್ ಸಿಟಿ ಅನ್ನೋ ಕುಖ್ಯಾತಿ ಬಂದೊದಗಿದೆ. ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ಇದೀಗ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿದ ರಾಜ್ಯದ ಮೊದಲ ನಗರ ಅನ್ನೋ ಹಣೆಪಟ್ಟಿ ಹೊತ್ತಿದೆ.
 
ಸ್ಮಾರ್ಟ್ ಸಿಟಿ ಹುಬ್ಬಳ್ಳಿಗೆ ಡಸ್ಟ್ ಸಿಟಿ ಕುಖ್ಯಾತಿ ..
ಹುಬ್ಬಳ್ಳಿ ಇದೀಗ ಸ್ವಿಜರ್ಲೆಂಡ್ ಮೂಲದ ಐಕ್ಯೂ ಏರ್ ನಡೆಸಿರುವ ಸಮೀಕ್ಷೆಯಲ್ಲಿ 29.7 ಸರಾಸರಿಯಲ್ಲಿ ಕಲುಷಿತ ವಾತಾವರಣ ದೃಢವಾಗಿದೆ. ಈ ಮೂಲಕ ರಾಜ್ಯದ ನಂಬರ್ ಒನ್ ಸ್ಥಾನಕ್ಕೆ ಹುಬ್ಬಳ್ಳಿನಗರ ಸೇರಿದೆ. ಐಕ್ಯೂ ಏರ್ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗವಾದ ಅಂಕಿ ಅಂಶಗಳಲ್ಲಿ..
 
ಹುಬ್ಬಳ್ಳಿ-29.7
ಯಾದಗಿರಿ-29.2
ಬೆಂಗಳೂರು- 29
ಬೆಳಗಾವಿ-28.1
ಚಿಕ್ಕಬಳ್ಳಾಪುರ- 26.1

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ