ಅತ್ಯಾಚಾರ ಆರೋಪಿಗಳನ್ನು 15 ವರ್ಷಗಳ ಬಳಿಕ ಸೆರೆಹಿಡಿದ ಪೊಲೀಸರು!
ಬರೋಬ್ಬರಿ 15 ವರ್ಷಗಳ ಬಳಿಕ ದೆಹಲಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 2006 ರಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ 13 ವರ್ಷದ ಬಾಲಕಿಯನ್ನು ಆರೋಪಿ ಅಪಹರಿಸಿ ತನ್ನ ಹಳ್ಳಿಗೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದ.
ಕೆಲವು ದಿನಗಳ ಬಳಿಕ ಆಕೆಗೆ ಯಾರಿಗೂ ಈ ವಿಚಾರ ತಿಳಿಸದಂತೆ ಬೆದರಿಕೆ ಹಾಕಿ ಬಸ್ ನಿಲ್ದಾಣವೊಂದರಲ್ಲಿ ಕರೆತಂದುಬಿಟ್ಟಿದ್ದ. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಸತತ ಪ್ರಯತ್ನದ ಬಳಿಕ ಪೊಲೀಸರು ಆರೋಪಿಯನ್ನು ಮತ್ತು ಆತನಿಗೆ ಸಹಾಯ ಮಾಡಿದ್ದ ಸಹೋದರಿಯನ್ನು ಸೆರೆಹಿಡಿದಿದ್ದಾರೆ.