ನೆರೆಮನೆಯಾತನೊಂದಿಗೆ ಸಂಬಂಧ ಹೊಂದಿದ್ದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?
ಬುಧವಾರ, 17 ಮಾರ್ಚ್ 2021 (08:24 IST)
ಮುಂಬೈ : ಪತ್ನಿಯ ಕೆನ್ನೆ, ಕೈ, ಮೈಗಳಿಗೆ ಬಿಸಿ ಸೌಟಿನಿಂದ ಆಕೆಯ ಪತಿ ಬರೆ ಹಾಕಿದ ಘಟನೆ ಮಹಾರಾಷ್ಟ್ರದ ಮುಂಬೈನ ಪೊವಾಯಿಯಲ್ಲಿ ನಡೆದಿದೆ.
ಸಂತ್ರಸ್ತೆ ನೆರೆಮನೆಯಾತನೊಂದಿಗೆ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಪತಿ ಆಕೆಯೊಂದಿಗೆ ಜಗಳಕ್ಕೀಳಿದಿದ್ದಾನೆ. ಪತ್ನಿ ಈ ಬಗ್ಗೆ ವಾದ ಮಾಡಿದ್ದಾಳೆ.
ಇದರಿಂದ ಕೋಪಗೊಂಡ ಪತಿ ಗ್ಯಾಸ್ ಮೇಲೆ ಸ್ಟೀಲ್ ಸೌಟನ್ನು ಬಿಸಿ ಮಾಡಿ ಆಕೆಗೆ ಇಟ್ಟಿದ್ದಾನೆ.
ಈ ಬಗ್ಗೆ ಪತ್ನಿ ಪೊಲೀಸರಿಗೆ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.