ಗಂಡನ ಎದುರೇ ಮಹಿಳೆ ಮೇಲೆ ಮಾಜಿ ಪತಿಯ ಸಹೋದರನ ವಿಕೃತಿ

ಮಂಗಳವಾರ, 16 ಮಾರ್ಚ್ 2021 (11:06 IST)
ಜೈಪುರ: ಗಂಡನ ಎದರೇ ಮಾಜಿ ಪತಿಯ ಸಹೋದರ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.


ಮಾನಭಂಗಕ್ಕೀಡಾದ ಮಹಿಳೆ ಮಾಜಿ ಗಂಡನ ಬಿಟ್ಟು ಬೇರೊಬ್ಬರನ್ನು ಮದುವೆಯಾಗಿದ್ದಳು. ಘಟನೆ ನಡೆದ ದಿನ ಹಾಲಿ ಪತಿ ಹಾಗೂ ಮಗುವಿನೊಂದಿಗೆ ಮನೆಗೆ ತೆರಳುತ್ತಿದ್ದಾಗ ಮಾಜಿ ಪತಿಯ ಸಹೋದರ ತನ್ನ ನಾಲ್ವರು ಸಹಚರರೊಂದಿಗೆ ಆಕೆಯನ್ನು ಅಡ್ಡಗಟ್ಟಿ ಪಕ್ಕದ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದಿದ್ದ.

ಬಳಿಕ ಆಕೆಯ ಜೊತೆಗಿದ್ದ ಪತಿಯ ಮೇಲೆ ಹಲ್ಲೆ ನಡೆಸಿ ಕೈಕಾಲು ಕಟ್ಟಿದ್ದ. ಆತನ ಎದುರೇ ಮಹಿಳೆಯ ಮೇಲೆ ಮಾನಭಂಗ ಮಾಡಿದ್ದ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಮಹಿಳೆ ಮತ್ತು ಆಕೆಯ ಮಗು ಹೇಗೋ ಪಕ್ಕದ ರಸ್ತೆಗೆ ಬಂದು ಅಲ್ಲಿದ್ದವರಿಗೆ ವಿಷಯ ತಿಳಿಸಿದ್ದಳು. ಬಳಿಕ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ