ಆರೋಪಿ ಸಿದ್ಧಿಕಿ ವಿರುದ್ಧ ಐಪಿಸಿ ಸೆಕ್ಸನ್ 376, 506, 324 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನಿಗೆ ಸಹಾಯ ಮಾಡಿದ ಆರೋಪದ ಮೇಲೆ ಪೀಡಿತಳ ಪತಿಯ ಮೇಲೂ ಕೇಸ್ ದಾಖಲಿಸಲಾಗಿದೆ. ಸಿದ್ಧಿಕಿಯನ್ನು ಕುಕ್ಶಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದ್ದು, ನಂತರ ನ್ಯಾಯಾಂಗ ಬಂಧನದಲ್ಲಿರಸಲಾಗಿದೆ. ಘಟನೆಯ ನಂತರ ಪೀಡಿತಳ ಪತಿ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಪತಿಯ ಅನುಪಸ್ಥಿತಿಯಲ್ಲಿ ಈ ಮೊದಲು ಎರಡು ಬಾರಿ ಮಹಿಳೆಯ ಮೇಲೆ ನೊಮಾನ್ ಸಿದ್ಧಿಕಿ ಅತ್ಯಾಚಾರ ಎಸಗಿದ್ದ ಮತ್ತು ಆ ದೃಶ್ಯಾವಳಿಗಳನ್ನು ಚಿತ್ರೀಕರಿಸಿಕೊಂಡು ಆಕೆಗೆ ಬೆದರಿಕೆ ಒಡ್ಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಆಕೆ ಟ್ರಕ್ ಡ್ರೈವರ್ ಆಗಿದ್ದ ತನ್ನ ಗಂಡನಲ್ಲಿ ದೂರು ನೀಡಿದಳು. ಆಗ ಆಕೆಯನ್ನಾತ ಆರೋಪಿ ಸಿದ್ಧಿಕಿಯ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಸಿದ್ಧಿಕಿ ಆಕೆಯ ಮೇಲೆ ಮತ್ತೆ ಅತ್ಯಾಚಾರ ಎಸಗಿದ. ತನ್ನ ಜತೆ ನಡೆದ ಅನ್ಯಾಯವನ್ನು ಆಕೆ ತನ್ನ ಕುಟುಂಬದ ಹಿರಿಯ ಸದಸ್ಯರಿಗೆ ಜತೆ ಹೇಳಿಕೊಂಡಳು. ನಂತರ ಕುಟುಂಬದ ಸದಸ್ಯರ ಬೆಂಬಲದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.