ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ

ಶುಕ್ರವಾರ, 3 ನವೆಂಬರ್ 2023 (14:43 IST)
ಬೆಂಗಳೂರಿನಲ್ಲಿ ಮನನೊಂದು ಗೃಹಿಣಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೃತ ಐಶ್ವರ್ಯ ಪತಿ ರಾಜೇಶ್ ಸೇರಿ ಐವರು ಆರೋಪಿಗಳನ್ನ ಗೋವಿಂದರಾಜನಗರ ಪೊಲೀಸರು ಬಂಧನ ಮಾಡಿದ್ದಾರೆ.ಮಾವ ಗಿರಿಯಪ್ಪ,ಅತ್ತೆ ಸೀತಾ,ಪತಿ ರಾಜೇಶ್, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ರನ್ನ ಬಂಧನಮಾಡಿದ್ದಾರೆ.
 
ಸೊಸೆ ಸುಸೈಡ್ ಬಳಿಕ ಗೋವಾ, ಮುಂಬೈ‌ನಲ್ಲಿ‌ ಪತಿ ಮನೆಯ ಸದಸ್ಯರು ಪಾರ್ಟಿ ಮಾಡ್ತಿದ್ರು.ಅಕ್ಟೋಬರ್ 26 ರಂದು ಗೋವಿಂದರಾಜ ನಗರ ತವರುಮನೆಯಲ್ಲಿ ಸುಸೈಡ್ ಮಾಡಿಕೊಂಡಿದ್ದು,ಮನೆಯಲ್ಲಿ ಯಾರು ಇಲ್ಲದ ವೇಳೆ ಪ್ಯಾನಿಗೆ ನೇಣು ಬಿಗಿದುಕೊಂಡು ಸುಸೈಡ್ ಮಾಡಿಕೊಂಡಿದ್ದಾಳೆ.
 
26 ವರ್ಷದ ಗೃಹಿಣಿ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿದ್ದು,ಘಟ‌ನೆ ಸಂಬಂಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.ಒಂದು ವಾರದ ಬಳಿಕ ಆತ್ಮಹತ್ಯೆ ಹಿಂದಿನ ಅಸಲಿ ಕಹಾನಿ ಹೊರಬಿದ್ದಿದೆ.ಮದುವೆ ಮಾಡಿಸಿದ್ದು ಸಂಬಂಧಿಕರೇ ಕೊನೆಗೂ ಮದುವೆ ಮುರಿದಿದ್ದು ಸಂಬಂಧಿಕರೇ,ವರದಕ್ಷಿಣೆ ಕಿರುಕುಳಕ್ಕೆ  ಮನನೊಂದು ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದು,ಐಶ್ವರ್ಯ (26)ಆತ್ಮಹತ್ಯೆಗೆ ಶರಣಾದ ಗೃಹಿಣಿಯಾಗಿದ್ದು,ಕಳೆದ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನ ಮದುವೆಯಾಗಿದ್ದಳು.ಕುಟುಂಬಸ್ಥರ ನಿಶ್ಚಯದಂತೆ ಮದುವೆಯಾಗಿದ್ದರು.
 
ಪ್ರಸಿದ್ದ  ಡೈರಿ ರಿಚ್ ಐಸ್ ಕ್ರೀಮ್ ಕಂಪನಿಯ  ರಾಜೇಶ್ ಕುಟುಂಬ ಮಾಲೀಕರಾಗಿದ್ದರು.ಇದೇ ಕಂಪನಿಯಲ್ಲಿ  ಐಶ್ವರ್ಯ ಸಂಬಂಧಿ ರವೀಂದ್ರ ಆಟಿಡರ್ ಆಗಿದ್ದ.ರವೀಂದ್ರ ಎಂಬುವವರು ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡ.ರವೀಂದ್ರನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು.ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಉಂಟಾಗಿ ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿಹಿಂಡಿದ್ರು.ಐಶ್ಯರ್ಯ ಚಾರಿತ್ರ್ಯ ವಧೆ ಮಾಡಿ ಕಿರುಕುಳ ನೀಡಿದ್ದು.
 
ಪತಿ ರಾಜೇಶ್ ಕುಟುಂಬಕ್ಕೆ  ಇಲ್ಲಸಲ್ಲದ ಕಟ್ಟುಕಥೆ  ರವೀಂದ್ರ ಕುಟುಂಬ ಹೇಳ್ತಿದ್ರು.ಅಷ್ಟೇ ಅಲ್ಲದೇ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರಂತೆ ಇದರಿಂದಾಗಿ ರಾಜೇಶ್ ಕುಟುಂಬ ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡ್ತಿದ್ದರಂತೆ,ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿಯಿಂದ ಕಿರುಕುಳ ನಿತ್ಯ ಕೊಡ್ತಿದ್ದು,ವರದಕ್ಷಿಣೆ ತರುವಂತೆಯೂ ಹೇಳಿ ಕಿರುಕುಳ ಆರೋಪ ಮಾಡಲಾಗಿದೆ.
 
ಎಷ್ಥೇ ಕಿರುಕುಳ ಕೊಟ್ರು ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದಳು.ತಾನು ದುಡಿದ ಹಣದಲ್ಲಿ ಗಂಡನಿಗೆ ಐಶಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳಂತೆ ಕುಟುಂಬಸ್ಥರ ಮಾತನ್ನ ಕೇಳಿ ಗಂಡ ರಾಜೇಶ್  ಹೆಂಡತಿಗೆ ನಿಂದನೆ ಮಾಡಿದ್ದ.ಇದರಿಂದಾಗಿ ನೊಂದು ಕಳೆದ 20 ದಿನಗಳ ಹಿಂದೆ ಗಂಡನ ಮನೆಬಿಟ್ಟು ತವರಿಗೆ ಐಶ್ವರ್ಯ ಬಂದಿದ್ದಳು.ಕಳೆದ 26 ರಂದು ಮನನೊಂದು ಐಶ್ವರ್ಯ ಆತ್ಮಹತ್ಯತೆಗೆ ಶರಣಾಗಿದ್ದಾಳೆ.ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು,ಘಟನೆ ಸಂಬಂಧ ಐಶ್ವರ್ಯ ತಾಯಿಯಿಂದ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.ಗಂಡ ರಾಜೇಶ್, ಅತ್ತೆ ಸೀತ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮಿ ಮೇಲೆ ದೂರು ದಾಖಲಾಗಿದೆ.
 
ಜೊತೆಗೆ ಸಂಸಾರದಲ್ಲಿ ಒಡೆಯಲು ಪ್ರೇರೆಪಣೆ ನೀಡಿದ್ದ ಸಂಬಂಧಿಕರಾದ ರವೀಂದ್ರ , ಗೀತಾ , ಶಾಲಿನ , ಓಂಪ್ರಕಾಶ್  ಎಂಬುವವರ ಮೇಲೂ ದೂರು ದಾಖಲಾಗಿದ್ದು,ಕೇಸ್ ದಾಖಲಿಸಿ ಐವರು ಆರೋಪಿಗಳ ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ