ಪತ್ನಿ ಆ ಜಾಗದಲ್ಲಿ ಸರಸ ಆಡದ್ದಕ್ಕೆ ಪತಿ ಮಾಡಿದ ನೀಚ ಕೆಲಸ
ಕಾಮಾ ತುರಾಣಂ ನ ಭಯಂ ನ ಲಜ್ಜಾ ಎನ್ನೋದಕ್ಕೆ ಮತ್ತೊಂದು ಮಗದೊಂದು ಸಾಕ್ಷಿಗಳು ಸಿಗುತ್ತಲೇ ಇವೆ. ತನ್ನ ಪತ್ನಿ ತಾನು ಹೇಳಿದ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಲಿಲ್ಲ ಅಂತ ಗಂಡನೊಬ್ಬ ಇಂಥ ಕೆಲಸ ಮಾಡಿದ್ದಾನೆ.
19 ವರ್ಷದ ತನ್ನ ಪತ್ನಿಯನ್ನು ಪತಿಯು ಸ್ನಾನ ಗೃಹಕ್ಕೆ ಕರೆದಿದ್ದಾನೆ. ಅಲ್ಲಿ ಸಂಭೋಗ ಮಾಡಲು ಒತ್ತಾಯಿಸಿದ್ದಾನೆ. ಆದರೆ ಗಂಡನ ಮಾತಿಗೆ ಪತ್ನಿ ನಿರಾಕರಿಸಿದ್ದೇ ತಡ ಆಕೆಗೆ ಥಳಿಸಿದ್ದಾನೆ.
ಪತಿಯಿಂದ ಥಳಿತಕ್ಕೆ ಒಳಗಾದ ಗೃಹಿಣಿ ಗಂಡ ಹಾಗೂ ಆತನ ಕುಟುಂಬದವರ ವಿರುದ್ಧ ದೂರು ದಾಖಲು ಮಾಡಿದ್ದಾಳೆ.
ಪತಿಯ ಸಹೋದರ ಅಲ್ಲದೇ ಮನೆ ಮಂದಿ ಮೇಲೆ ವರದಕ್ಷಿಣೆ ಕೇಸ್ ಹಾಕಿದ್ದಾಳೆ. ಗಾಂಧಿ ನಗರದಲ್ಲಿ ಈ ಘಟನೆ ನಡೆದಿದ್ದು, ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಹಾಗೂ ಬಲವಂತವಾಗಿ ಸ್ನಾನ ಗೃಹಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಅಂತ ಪತ್ನಿ ಗೋಮತಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ.