ಕಿಸ್ ಮಾಡ್ತೀನಿ ಅಂತ ಪತ್ನಿಯ ನಾಲಿಗೆ ಕಟ್ ಮಾಡಿದ ಗಂಡ

ಶುಕ್ರವಾರ, 11 ಅಕ್ಟೋಬರ್ 2019 (16:37 IST)
ಗಂಡ – ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ. ಈಗೀಗ ಕೆಲವು ದಂಪತಿಯ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ, ಆಸ್ಪತ್ರೆ ಮಂಚಕ್ಕೆ ಒಯ್ದು ಮಲಗಿಸುತ್ತಿವೆ.

ಆಕೆ ಈಗಾಗಲೇ ಎರಡು ಮದುವೆಯಾಗಿದ್ದಳು. ಆತ ಒಂದು ಮದುವೆಯಾಗಿದ್ದನು. ಅದು ಹೇಗೋ ಪ್ರೀತಿ ಚಿಗುರಿ ಇಬ್ಬರೂ ಮದುವೆಯಾಗಿದ್ದಾರೆ.

ಆದರೆ ಮದುವೆ ಆದ ಹೊಸತರಲ್ಲಿ ಎಲ್ಲವೂ ಚೆನ್ನಾಗಿತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲೂ ಜಗಳ ಶುರುವಾಗಿದೆ. ಸಣ್ಣ ವಿಷಯಕ್ಕೂ ಗಂಡ ದೊಡ್ಡದಾಗಿ ಜಗಳ ಮಾಡೋಕೆ ಪತ್ನಿಯೊಂದಿಗೆ ಮುಂದಾಗಿದ್ದಾನೆ.

ಜಗಳ ವಿಪರೀತವಾದ ಬಳಿಕ ಗಂಡ ಗರಂ ಆಗಿದ್ದಾನೆ. ಆಗಲೇ ಹೆಂಡತಿಯನ್ನು ತಬ್ಬಿಕೊಂಡಿದ್ದಾನೆ. ಕಿಸ್ ಮಾಡಬೇಕು ಅಂತ ಮುಂದಾಗಿದ್ದಾನೆ.  ಗಂಡ ಜಗಳ ಮರೆತಿರಬಹುದು ಅಂತ ತಿಳಿದ ಹೆಂಡತಿ ಕಿಸ್ ಮಾಡೋಕೆ ಮುಂದಾದಾಗ ಅವಳ ನಾಲಿಗೆ ಕಟ್ ಮಾಡಿ ಪರಾರಿಯಾಗಿದ್ದಾನೆ.

ಆರೋಪಿ ಗಂಡ ಅಯೂಬ್ ಪರಾರಿಯಾಗಿದ್ದು, ಆತನ ಪತ್ನಿ ತಸ್ಲಿಮಾ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಅಂದ್ಹಾಗೆ ಈ ಘಟನೆ ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ