ಗಂಡ- ಹೆಂಡತಿಯ ಜಗಳ ಕೊಲೆಯಲ್ಲಿ ಅಂತ್ಯ

ಭಾನುವಾರ, 23 ಅಕ್ಟೋಬರ್ 2022 (14:03 IST)
ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿಹಾರಿಕಾ ಎಂಬ ಗೃಹಿಣಿಯ ಕೊಲೆಯಾಗಿದೆ.ಗಂಡನೇ ಕೊಲೆ ಮಾಡಿರುವ ಆರೋಪ ಕೇಳಿಬರುತ್ತಿದೆ.ಖಾಸಗಿ ಶಾಲೆಯಲ್ಲಿ ಮೃತ ನಿಹಾರಿಕ ಕೆಲಸ ಮಾಡುತ್ತಿದಳು.ಗಂಡನ ಕಿರುಕುಳ ತಾಳದೆ ಅಕ್ಕನ ಮನೆ ನಿಹಾರಿಕ ಸೇರಿದಳು.ಕಳೆದ ಎರಡು ದಿನಗಳ ಹಿಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಗಂಡ ಹೇಳಿದ್ದ.ಅಲ್ಲದೇ ಶಾಲೆಯ ಕಾರ್ಯಕ್ರಮಕ್ಕೆ ತೆರಳುವ ವಿಚಾರವಾಗಿ ನಿಹಾರಿಕಗೆ ನಿಂದನೆ ಮಾಡಿದ.ಈ ವೇಳೆ ಮಾತಿಗೆ ಮಾತು ಬೆಳೆದು ಗಂಡ ನಿಹಾರಿಕಳನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಸದ್ಯ  ನಿಹಾರಿಕ ಮೃತದೇಹ ಕಿಮ್ಸ್ ಆಸ್ಪತ್ರೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ