ಹುಬ್ಬಳ್ಳಿ: ಹೆಂಡ್ತಿ ಕಿರುಕುಳದಿಂದಾಗಿ ಪತಿ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪತಿಯ ಡೆತ್ ನೋಟ್ ನಲ್ಲಿ ಏನಿತ್ತು ನೋಡಿ. ಇದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅತುಲ್ ಸುಭಾಷ್ ಕೇಸ್ ನ್ನೇ ಹೋಲುತ್ತಿದೆ.
ಪೀಟರ್ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಮನೆಯವರೆಲ್ಲರೂ ಚರ್ಚ್ ಗೆ ಹೋಗಿದ್ದಾಗ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯವರು ಬಂದು ನೋಡಿದಾಗ ಪೀಟರ್ ಮೃತದೇಹ ಪತ್ತೆಯಾಗಿತ್ತು.
ಪಕ್ಕದಲ್ಲೇ ಡೆತ್ ನೋಟ್ ಕೂಡಾ ಸಿಕ್ಕಿದೆ. ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ಪಿಂಕಿ (ಪತ್ನಿ) ನಂಗೆ ಟಾರ್ಚರ್ ಮಾಡ್ತಿದ್ದಾಳೆ. ನನ್ನ ಶವ ಪೆಟ್ಟಿಗೆ ಮೇಲೆ ಹೆಂಡತಿಯ ಟಾರ್ಚರ್ ನಿಂದಾಗಿಯೇ ಸಾಯುತ್ತಿದ್ದೇನೆ ಎಂದು ಬರೆಸಿ ಎಂದು ಬರೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಸಹೋದರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ 11 ತಿಂಗಳಿನಿಂದ ಪತಿ-ಪತ್ನಿ ದೂರವಾಗಿದ್ದಾರೆ. ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು 20 ಲಕ್ಷ ರೂ. ಗೆ ಬೇಡಿಕೆಯಿಟ್ಟಿದ್ದಾಳೆ. ಆದರೆ ನನಗೆ ಅಷ್ಟು ಕೊಡುವ ಶಕ್ತಿಯಿಲ್ಲ ಎಂದಿದ್ದಕ್ಕೆ ನೀನು ಸತ್ತರೆ ಸಾಯಿ ಎಂದು ಪತ್ನಿ ಹೇಳಿದ್ದಳು ಎನ್ನಲಾಗಿದೆ. ಹೀಗಾಗಿ ಪತ್ನಿಯ ಕಿರುಕುಳ ತಾಳಲಾರದೇ ಪೀಟರ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.