ಇಂದಿರಾ ಕ್ಯಾಂಟೀನ್ ಮುಚ್ಚಿದರೆ ಹುಷಾರ್
ಕಾಂಗ್ರೆಸ್ ಸರಕಾರ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟಿನ್ ಗಳಿಗೆ ಗ್ರಹಣ ಹಿಡಿಯುತ್ತಿರುವಂತೆ ಪ್ರತಿಭಟನೆಗಳು ಶುರುವಾಗಿವೆ.
ಇಂದಿರಾ ಕ್ಯಾಂಟೀನ್ ಮುಚ್ಚಿದರೆ ಉಗ್ರ ಹೋರಾಟ ಮಾಡಲಾಗುತ್ತದೆ. ಹೀಗಂತ ಮತ್ತೆ ಬಿ.ಎಸ್.ಯಡಿಯೂರಪ್ಪ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.
ಇಂದಿರಾ ಕ್ಯಾಂಟೀನ್ ಮುಚ್ಚುವ ಬಗ್ಗೆ ಮಾಹಿತಿ ನನ್ನ ಬಳಿ ಇಲ್ಲಾ. ಬಡವರಿಗಾಗಿ ಜಾರಿ ತಂದಿರುವ ಯೋಜನೆಗಳನ್ನ ಮುಚ್ಚಬಾರದು.
ಹೀಗಂತ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.