ಅತ್ಯಾಚಾರ ಸಂತ್ರಸ್ತೆಯ ಫೋಟೊ ಹರಿಬಿಟ್ಟ ಬಿಜೆಪಿ ಶಾಸಕ: ಪ್ರಕರಣ ದಾಖಲು!
ಅಪ್ರಾಪ್ತೆಯ ಅತ್ಯಾಚಾರ ಸಂತ್ರಸ್ತೆಯ ಫೋಟೊ ಹಾಗೂ ವೀಡಿಯೊವನ್ನು ಸಾಕ್ಷ್ಯ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹೈದರಾಬಾದ್ ನ ಬಿಜೆಪಿ ಶಾಸಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಐಎಂಐಎಂ ಶಾಸಕನ ಪುತ್ರ ಈ ಪ್ರಕರಣದ ಹಿಂದೆ ಇದ್ದಾನೆ ಎಂದು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿ ಸಾಕ್ಷ್ಯ ಇಲ್ಲಿದೆ ನೋಡಿ ಎಂದು ಸಂತ್ರಸ್ತೆ ೧೭ ವರ್ಷದ ಬಾಲಕಿಯ ಫೋಟೊ ಮತ್ತು ವೀಡಿಯೋವನ್ನು ಬಿಜೆಪಿ ಶಾಸಕ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದರು.
ಪ್ರಕರಣದ ತನಿಖೆ ನಡೆಯುತ್ತಿರುವ ಹಂತದಲ್ಲಿ ಬಿಜೆಪಿ ಶಾಸಕ ಈ ರೀತಿ ಸಂತ್ರಸ್ತೆಯ ಫೋಟೊ ಬಿಡುಗಡೆ ಮಾಡಿರುವುದು ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಜುಬಿಲಿಹಿಲ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.