ಡಿಕೆ ಶಿವಕುಮಾರ್ ಚರ್ಚ್ ಗೆ ಹೋಗ್ತಾರೆ ಆದ್ರೆ ಅದು ನಮ್ದು ಅನ್ನಕ್ಕಾಗುತ್ತಾ: ವಿ ಸೋಮಣ್ಣ

Krishnaveni K

ಶುಕ್ರವಾರ, 29 ಆಗಸ್ಟ್ 2025 (15:04 IST)
ಬೆಂಗಳೂರು: ಡಿಕೆ ಶಿವಕುಮಾರ್ ಚರ್ಚ್ ಗೆ ಹೋಗ್ತಾರೆ. ಹಾಗಂತ ಅದನ್ನು ನಮ್ದು ಎನ್ನಕ್ಕಾಗುತ್ತಾ? ಎಂದು ಕೇಂದ್ರ ಸಚಿವ ವಿ ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.

ಚಾಮುಂಡೇಶ್ವರಿ ದೇವಿ, ಬೆಟ್ಟ  ಕೇವಲ ಹಿಂದೂಗಳ ಆಸ್ತಿಯಲ್ಲ. ಇದು ಎಲ್ಲಾ ಧರ್ಮದವರಿಗೆ ಸೇರಿದ್ದು ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಇಂದು ಕೇಂದ್ರ ಸಚಿವ ವಿ ಸೋಮಣ್ಣ ಸರಿಯಾಗಿಯೇ ಛಾಟಿ ಬೀಸಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಡಿಕೆಶಿ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋಮಣ್ಣ ‘ಎಲ್ಲಾ ಜಾತಿಯವರೂ ಎಲ್ಲಾ ಧರ್ಮದವರೂ ಬಂದು ಹೋಗ್ಬಹುದು. ಅದು ನಿಜಾನೇ. ನಾವೂ ಮಸೀದಿಗಳಿಗೆ, ಚರ್ಚ್ ಗೆ ಹೋಗ್ತೀವಿ. ಆದರೆ ಅದು ನಮ್ದು ಅಂತೀವಾ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ಶಿವಕುಮಾರ್ ಅವರು ಚರ್ಚ್ ಗೆ ಹೋಗ್ತಾರೆ ಅವರದ್ದು ಅಂತಾರಾ? ನಾವೂ ಚರ್ಚ್ ಗೆ ಹೋಗ್ತೀವಿ ನಮ್ದು ಅಂತೀವಾ? ನಮ್ಮ ಸಂಪ್ರದಾಯ ರೀ.. ನಮ್ಮ ಪೂರ್ವಜರು ಈ ದೇಶಕ್ಕೆ ಕೊಟ್ಟಿರುವ ದೊಡ್ಡ ಅಡಿಪಾಯ ಇದು’ ಎಂದು ಸೋಮಣ್ಣ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ