ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವುದಕ್ಕೆ ನನ್ನ ವಿರೋಧವಿದೆ: ರಮೇಶ ಜಾರಕಿಹೊಳಿ

Sampriya

ಸೋಮವಾರ, 16 ಸೆಪ್ಟಂಬರ್ 2024 (19:35 IST)
Photo Courtesy X
ಅಥಣಿ: ಪಕ್ಷದಲ್ಲಿ ಜೂನಿಯರ್ ಆಗಿರುವ ಬಿವೈ ವಿಜಯೇಂದ್ರ ಅವರನ್ನು ಎಂದಿಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಒಪ್ಪುವುದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷಕ್ಕೆ 'ಭ್ರಷ್ಟ' ಎಂಬ ಲೇಬಲ್ ತಂದುಕೊಟ್ಟಿದ್ದೇ ವಿಜಯೇಂದ್ರ. ಅವರು ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವುದಕ್ಕೆ ನನ್ನ ವಿರೋಧವಿದೆ. ಆದರೆ ನಾನು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ಎಂದಿಗೂ ವಿರೋಧಿಸುವುದಿಲ್ಲ. ಅನಂತಕುಮಾರ ನಿಧನರಾದ ನಂತರ ನಮ್ಮ ಪಕ್ಷದಲ್ಲಿ ಯಾರೂ ಪ್ರಬಲ ನಾಯಕರಾಗಿಲ್ಲ  ಎಂದು ಹೇಳಿದರು.

ಬಿಜೆಪಿ ನಾಯಕರೊಂದಿಗೆ ಆರ್‌ಎಸ್‌ಎಸ್‌ನವರು ಸಭೆ ನಡೆಸಿದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಏನೂ ಚರ್ಚೆಯಾಯಿತು ಹಾಗೂ ಯಾರನ್ನು ಬೈಯಲಾಯಿತು ಎಂಬುದರ ಬಗ್ಗೆ ಹೇಳಲು ಆಗುವುದಿಲ್ಲ. ಆದರೆ, ಬಿಜೆಪಿ ಆಡಳಿತವನ್ನು ಒಬ್ಬರ ಕೈಯಲ್ಲಿ ಕೊಡುವುದು ಬೇಡ ಎಂದಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ