ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ - ಕೆ.ಹೆಚ್.ಮುನಿಯಪ್ಪ

ಸೋಮವಾರ, 16 ಡಿಸೆಂಬರ್ 2019 (11:23 IST)
ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ಪರಿಗಣಿಸುವಂತೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮನವಿ ಮಾಡಿದ್ದಾರೆ.ಎಐಸಿಸಿ ಪದಾಧಿಕರಿಗಳ ಬಳಿ ನಾನು ಮನವಿ ಮಾಡಿದ್ದೇನೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಹೈಕಮಾಂಡ್ ಅವಕಾಶ ನೀಡಿದರೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.


ಈ ಹಿಂದೆ ಪಕ್ಷ ನನಗೆ ಸಾಕಷ್ಟು ಜವಾಬ್ದಾರಿಯನ್ನ ನೀಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿರ್ಧಾರಕ್ಕೆ ನಾನು ಬದ್ಧ. ಸೋನಿಯಾ ಗಾಂಧಿ ಭೇಟಿ ಮಾಡುವುದಿಲ್ಲ ಎಂದು  ಮುನಿಯಪ್ಪ  ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ