ಭಾರತ-ವಿಂಡೀಸ್ ಪಂದ್ಯದ ವೇಳೆ ಮೈದಾನಕ್ಕಿಳಿದ ಅನಪೇಕ್ಷಿತ ಅತಿಥಿ!

ಸೋಮವಾರ, 16 ಡಿಸೆಂಬರ್ 2019 (09:34 IST)
ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಮೈದಾನಕ್ಕೆ ಬಯಸದ ಅತಿಥಿಯೊಬ್ಬರ ಆಗಮನವಾಗಿದೆ.


ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಮೈದಾನಕ್ಕೆ ನುಗ್ಗುವುದು ನೋಡಿದ್ದೇವೆ. ಆದರೆ ನಿನ್ನೆಯ ಪಂದ್ಯದಲ್ಲಿ ನಾಯಿಯೊಂದು ಇದ್ದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದೆ.

ಭಾರತ ಬ್ಯಾಟಿಂಗ್ ಮಾಡುತ್ತಿದ್ದಾಗ 26 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿಗಳು ನಾಯಿಯನ್ನು ಹಿಡಿಯಲು ಯತ್ನಿಸಿದಾಗ ಅದು ಎರ್ರಾ ಬಿರ್ರಿ ಓಡಿ ಸಿಬ್ಬಂದಿಗಳನ್ನು ಆಟವಾಡಿಸಿತು. ಸಾಕಷ್ಟು ಆಟವಾಡಿಸಿದ ಬಳಿಕ ನಾಯಿಯೇ ಮೈದಾನದಿಂದ ಓಡಿ ಹೋಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ