ನಾನು ಪಕ್ಷಾಂತರ ಮಾಡಲ್ಲ: ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ನಾನು ಪಕ್ಷಾಂತರ ಮಾಡಲ್ಲ. ಅನಂತ್ ಕುಮಾರ್ ಭೇಟಿಯಾಗಲೆಂದು ಐಬಿಗೆ ಹೋಗಿಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದಾರೆ.
ಕೆಲ ಮಾಧ್ಯಮಗಳು ಸ್ಪಷ್ಟೀಕರಣ ನೀಡಿದರೂ ಅಪಪ್ರಚಾರ ಮಾಡುತ್ತಿವೆ. ನಾನು ಅಮಿತ್ ಷಾರನ್ನು ಈವರೆಗೂ ನೋಡಿಲ್ಲ. ಅವರ ಭೇಟಿ ವಿಚಾರ ಸಹ ಸುಳ್ಳು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಜತೆಗಿದ್ದ ಸಚಿವ ಪ್ರಮೋದ್ ಮಧ್ವರಾಜ್ ಫೋಟೊ ವೈರಲ್ ಆಗಿತ್ತು. ಹೀಗಾಗಿ ಅವರು ಬಿಜೆಪಿ ಸೇರುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.