ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಯುವ ನಾಯಕ ವಿವೇಕ ಶೆಟ್ಟಿ ನನಗೆ ಪರಿಚಯಸ್ಥ. ಆದರೆ, ಆತನ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಎಪಿಎಂಸಿ ಚುನಾವಣಾ ಪ್ರಚಾರದಲಿದ್ದೇನೆ. ನನ್ನ ತೇಜೋವಧೆಗಾಗಿ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರ ರೌಡಿ ಗ್ಯಾಂಗ್, ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿದ್ದ ಕಾಂಗ್ರೆಸ್ ನಾಯಕ ವಿವೇಕ ಶೆಟ್ಟಿ ಮನೆಗೆ ನುಗ್ಗಿ ಮಹಿಳೆ ಮಕ್ಕಳು ಎನ್ನುವುದನ್ನು ನೋಡದೆ ಅಟ್ಟಹಾಸ ಮೆರೆದಿದ್ದು, ಈ ಭೀಭತ್ಸ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.