ಕಾಂಗ್ರೆಸ್​ಗೆ ಹೋಗೊ ದುಸ್ಥಿತಿ ನನಗೆ ಬಂದಿಲ್ಲ

ಸೋಮವಾರ, 3 ಜುಲೈ 2023 (21:15 IST)
ಕಾಂಗ್ರೆಸ್​ಗೆ ಸೇರುತ್ತಾರೆ ಎಂಬ ವದಂತಿ ಬಗ್ಗೆ ಮಾಜಿ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.. ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್​ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ ಟಿ.ವಿಗೆ ಹಾಕಿಸ್ತಾನೆ. ನಾನೇ ಕಾಂಗ್ರೆಸ್ ಸಿದ್ದಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರ್ತಿನಾ? ಎಂದು ಕಿಡಿಕಾರಿದ್ದಾರೆ.. ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದೋನು ನಾನು, ನನಗೇನ್ರಿ ಬಂದಿದೆ ಅಂತಹ ದುಃಸ್ಥಿತಿ ಕಾಂಗ್ರೆಸ್​ಗೆ ಹೋಗೋದು ಎಂದಿದ್ದಾರೆ.. ಜೆ.ಪಿ.ಮೂಮೆಂಟಲ್ಲಿ ಹೋರಾಟ ಮಾಡಿದವರು ನಾವು ನಾನು ಕಾಂಗ್ರೆಸ್​ಗೆ ಹೋಗ್ತಿನಾ.? ನಾನು ಕಾಂಗ್ರೆಸ್​ಗೆ ಹೋಗ್ತಿನಿ ಅಂತಾ ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ರು ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ