ಕಾಂಗ್ರೆಸ್​ ತನಿಖೆ ಮಾಡಿಸಲಿ-ಸಚಿವ ಆರ್. ಅಶೋಕ್

ಸೋಮವಾರ, 3 ಜುಲೈ 2023 (19:54 IST)
ಬಿಟ್ ಕಾಯಿನ್ ಹಗರಣವನ್ನು ಸರ್ಕಾರ ಎಸ್ಐಟಿ ತನಿಖೆಗೆ ನೀಡಿರುವ ವಿಚಾರಕ್ಕೆ ಮಾಜಿ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನ ಬೆದರಿಕೆಗೆ ಬಿಜೆಪಿ ಬಗ್ಗಲ್ಲ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆ, ಬಿಜೆಪಿಯವರನ್ನು ಕಟ್ಟಿಹಾಕಲು ಈ ರೀತಿ ಹೇಳುತ್ತಿದ್ದಾರೆ. ಇನ್ನು ನಮ್ಮನ್ನು ಹೆದರಿಸುವ ಉದ್ದೇಶದಿಂದ ತನಿಖೆ ಅಂತಿದ್ದಾರೆ.. ಆದರೆ ಕಾಂಗ್ರೆಸ್​​ನ ತನಿಖೆಗೆ ಬಿಜೆಪಿ ಹೆದರುವುದಿಲ್ಲ.. ರಾಜ್ಯದಲ್ಲಿ ಅವರ ಸರ್ಕಾರ ಇದ್ದರೆ, ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ.. ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ