ಕಾಂಗ್ರೆಸ್ ಸೇರುವ ಬಗ್ಗೆ ಯೋಚಿಸಿಲ್ಲ-ಮಾಜಿ ಸಚಿವ ವಿ.ಸೋಮಣ್ಣ

ಶನಿವಾರ, 9 ಸೆಪ್ಟಂಬರ್ 2023 (15:01 IST)
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಸೋಮಣ್ಣ ಪ್ರತಿಕ್ರಿಯಿಸಿದ್ದು,ಇನ್ನೂ ಪ್ರಿ ಮೆಚುರ್ ನಲ್ಲಿದೆ.ಆ ಬಗ್ಗೆ ಸರಿಯಾದ ಮಾಹಿತಿ ಕೂಡ ಇಲ್ಲ.ರಾಷ್ಟ್ರ ನಾಯಕರು ಏನು ಮಾಡ್ತಿದ್ದಾರೋ ಗೊತ್ತಿಲ್ಲ.ನನಗೂ ಆ ಬಗ್ಗೆ ಮಾಹಿತಿ ಇಲ್ಲ.ರಾಜ್ಯದಲ್ಲಿನ ಅಸ್ತಿರತೆ ಹೋಗಿಸಲು ಪ್ರಯತ್ನವನ್ನ ರಾಷ್ಟ್ರನಾಯಕರು ತೀರ್ಮಾನ ಮಾಡುತ್ತಿರಬಹುದು ಎಂದು ಸೋಮಣ್ಣ ಹೇಳಿದ್ರು.
 
ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರವಾಗಿ ಆ ಬಗ್ಗೆ ನಾನು ಇನ್ನೂ ಯೋಚನೆ ಮಾಡಿಲ್ಲ.ಬಿಜೆಪಿಯಿಂದ ದೂರ ಇರುವ ವಿಚಾರ ಸೇರಿದಂತೆ ಹಲವು ವಿಚಾರ ನಾನು ರಾಷ್ಟ್ರ ನಾಯಕರಿಗೆ ತಿಳಿಸಿದ್ದೇ‌ನೆ.ಅದನ್ನೆಲ್ಲ ಸರಿಪಡಿಸುವ ಕೆಲಸ ಮಾಡ್ತಾರೆ ಅನ್ನೋ ನಂಬಿಕೆ ಇದೆ.ಸರಿಪಡಿಸದಿದ್ದರೂ ನನಗೆ ಯಾವುದೇ ನಷ್ಟ ಇಲ್ಲ.ಕಾಂಗ್ರೆಸ್ ಸೇರುವ ವಿಚಾರವಾಗಿ ಆ ಬಗ್ಗೆ ಒಂದು ಕ್ಷಣವೂ ನಾನು ಯೋಚಿಸಿಲ್ಲ ಎಂದು ವಿ.ಸೋಮಣ್ಣ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ