ನಾನು ದಕ್ಷಿಣ ಭಾರತದವಳು, ನಾನು ಭಾರತೀಯಳಂತೆ ಕಾಣುತ್ತೇನೆ: ಪಿತ್ರೋಡಾಗೆ ನಟಿ ಪ್ರಣೀತಾ ತಿರುಗೇಟು

Sampriya

ಬುಧವಾರ, 8 ಮೇ 2024 (19:19 IST)
Photo Courtesy X
ಬೆಂಗಳೂರು: ದಕ್ಷಿಣ ಭಾರತೀಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಇದೀಗ ದಕ್ಷಿಣ ಭಾರತದ ಖ್ಯಾತ ನಟಿ ಪ್ರಣೀತಾ ಸುಭಾಷ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಸ್ಯಾಮ್ ಪಿತ್ರೋಡಾಗೆ ಖಡಕ್ಕಾಗಿ ತಿರುಗೇಟು ನೀಡಿದ್ದಾರೆ.

ನಾನು ದಕ್ಷಿಣ ಭಾರತದವಳು. ನಾನು ಭಾರತೀಯಳಂತೆ ಕಾಣುತ್ತೇನೆ, ಸ್ಯಾಮ್ ಪಿತ್ರೋಡಾ ಎಂದು ಎಕ್ಸ್​ ಖಾತೆಯಲ್ಲಿ ಬರೆದು ಫೋಟೊ ಶೇರ್ ಮಾಡಿದ್ದಾರೆ.

ಸ್ಯಾಮ್ ಪಿತ್ರೋಡಾ ಹೇಳಿಕೆ ಬಿಜೆಪಿಯವರಷ್ಟೇ ಅಲ್ಲದೆ ಹಲವರ ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಧಾನಿ ಮೋದಿ ಅವರು ಕೂಡಾ ನನ್ನ ದೇಶದವರನ್ನು ‌ಅವಮಾನಿಸುವುದನ್ನು ನಾನು ಸಹಿಸುವುದಿಲ್ಲ ಎಂದು ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಮೋದಿ ತಿರುಗೇಟು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ