20 ವರ್ಷದಲ್ಲಿ ಇಂತಹ ಘಟನೆ ನಡೆದಿರಲಿಲ್ಲ: ಮೂರು ಸಾವಿರ ಮಠದ ಸ್ವಾಮೀಜಿ

ಬುಧವಾರ, 20 ಏಪ್ರಿಲ್ 2022 (14:40 IST)

ಹುಬ್ಬಳ್ಳಿ - ಧಾರವಾಡದಲ್ಲಿ ಶಾಂತಿ ನೆಲೆಸಬೇಕಾಗಿರುವುದು ತೀರ ಅಗತ್ಯತೆ ಇದೆ ಎಂದು ಮೂರುಸಾವಿರಮಠದ ಶ್ರೀ ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು ಹಳೇ ಹುಬ್ಬಳ್ಳಿ ಗಲಭೆ ಹಿನ್ನೆಲೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಏ.17 ರಂದು ಹಳೇಹುಬ್ಬಳ್ಳಿ ಗಲಭೆಯಲ್ಲಿ ಗಾಯಗೊಂಡಿದ್ದ ಸಂಚಾರಿ ಪೋಲಿಸ್ ಇನ್ಸ್ಪೆಕ್ಟರ್ ಕಾಡದೇವರಮಠ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಇಂತಹ ಯಾವ ಘಟನೆಗಳು ನಡೆದಿಲ್ಲ. ಆದರೆ ಮೊನ್ನೆ ನಡೆದ ಘಟನೆ ತುಂಬಾ ಆಘಾತಕಾರಿಯಾದ ಘಟನೆಯಾಗಿದೆ. ಇಂತಹ ಸಂಭವಿಸಲು ಎರಡು ಕಡೆಗಳಲ್ಲಿ ಏನೂ ಸಮಸ್ಯೆ ಆಗಿರುತ್ತದೆ. ಇಂತಹ ಸಮಸ್ಯೆಗಳು ಯಾವ ಕಾಲಕ್ಕೂ ಆಗಬಾರದು. ನಾವೆಲ್ಲರೂ ಕೂಡಿ ಬಾಳಬೇಕು ಎಂದರು.

ನಾವೆಲ್ಲರೂ ದೇಶವನ್ನು ಬಿಟ್ಟು ಹೋಗಲು ಆಗುವುದಿಲ್ಲ. ಹಿಂದೂಗಳು ಹೋಗಲು ಆಗುವುದಿಲ್ಲ, ಇಸ್ಲಾಂ ಧರ್ಮಿಯರು ಹೋಗಲು ಆಗುವುದಿಲ್ಲ. ಕೂಡಿ ಬಾಳಬೇಕು. ಆದ್ದರಿಂದ ನಾವೆಲ್ಲರೂ ಶಾಂತಿಯಿಂದ ಇರಬೇಕು. ಅವರ ಹಬ್ಬ ಬಂದಾಗ ನಾವು ಶಾಂತಿಯಿಂದ ಇರಬೇಕು. ನಮ್ಮ ಹಬ್ಬ ಬಂದಾಗ ಅವರು ಶಾಂತಿಯಿ.ದ ಇರಬೇಕು. ಇದೇ ಘಟನೆಯನ್ನು ಸಾಕ್ಷಿಯಾಗಿರಿಕೊಂಡು ಮುಂದೆ ಬರುವ ರಮ್ಜಾನ್ ಹಬ್ಬದಲ್ಲಿ ಯಾವುದೇ ರೀತಿಯ ಗಲಾಟೆ ಆಗಬಾರದು. ನಾವೆಲ್ಲರೂ ಶಾಂತಿ, ಸೌಹಾರ್ಧತೆಯಿಂದ ನಡೆದುಕೊಳ್ಳಬೇಕು. ಇಡೀ ಜಗತ್ತಿಗೆ ಮಾದರಿಯಾದ ನಡಾವಳಿಯನ್ನು ತೋರಿಸಬೇಕಾಗಿದೆ. ಮತ್ತೊಮ್ಮೆ ಇಂತಹ ಘಟನೆಗಳು ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಬಾರದು ಎಂದು ಶ್ರೀಗಳು ಮನವಿ ಮಾಡಿದರು.‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ