ಶ್ರೀರಾಮುಲು ಜತೆಗೆ 50 ಜನರಿಗೆ ಕೇಳಿದ್ದೆ: ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ

Sampriya

ಶುಕ್ರವಾರ, 24 ಜನವರಿ 2025 (16:54 IST)
Photo Courtesy X
ಬೆಂಗಳೂರು: ನಾನು ಚುನಾವಣೆಗೂ ಮುನ್ನಾ ಕಾಂಗ್ರೆಸ್ ಸೇರ್ಪಡೆಗೆ ಆಫರ್ ನೀಡಿದ್ದೆ. ಈ ಸಂದರ್ಭದಲ್ಲಿ ರಾಮುಲು ನಾನು ಪಕ್ಷದಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದಿದ್ದರು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಡಿಕೆಶಿ ದಾಳದಂತೆ ಶ್ರೀರಾಮುಲು ಕುಣಿಯುತ್ತಿದ್ದಾರೆಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ  ಶಿವಕುಮಾರ್ ಅವರು,  ಈಗ ಪಕ್ಷಕ್ಕೆ ಕಾಲಿಟ್ಟು ಮನೆಯನ್ನೇ ಒಡೆಯುವ ಪ್ರಯತ್ನ ಪಡುತ್ತಿದ್ದಾರೆ.  ನಾನು ಅವನ ಹೆಸರು ಹೇಳಿ ಅವನನ್ನು ಯಾಕೆ ದೊಡ್ಡವನನ್ನಾಗಲಿ ಮಾಡಲಿ ಎಂದು ತಿರುಗೇಟು ನೀಡಿದರು.

ಮಾಜಿ ಸಚಿವ ಶ್ರೀರಾಮುಲು ಸೇರುತ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನಗೆ ಶ್ರೀರಾಮುಲು ಸಿಕ್ಕಿಲ್ಲ, ಆತನ ಜತೆ ಮಾತನಾಡಿಲ್ಲ. ಈ ಹಿಂದೆ ಆಫರ್ ನೀಡಿ ಕೇಳಿದ್ದೆ.  ಚುನಾವಣೆಗೆ ಮುನ್ನಾ ನಾನು ಆತನಲ್ಲಿ ಕೇಳಿದ್ದೆ.  ಅವರು ಬರಲ್ಲ ಅಂದಿದ್ರು. ಇದರ ಜತೆಗೆ 50 ಜನರಿಗೆ ಆಫರ್ ನೀಡಿದ್ದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಶ್ರೀರಾಮುಲು ಪಕ್ಷ ಸೇರುವ ಬಗ್ಗೆ ನನ್ನ ಟೇಬಲ್ ಬಳಿ ಬಂದ್ಮೇಲೆ ಮಾತನಾಡುತ್ತೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ