ದಾಖಲೆ ಸಮೇತ ಮಾಧ್ಯಮದ ಮುಂದೆ ಬರುತ್ತೇನೆ: ಭೂ ಒತ್ತುವರಿ ಆರೋಪಕ್ಕೆ ನಿಖಿಲ್ ತಿರುಗೇಟು

Sampriya

ಶನಿವಾರ, 22 ಮಾರ್ಚ್ 2025 (14:36 IST)
Photo Courtesy X
ಬೆಂಗಳೂರು: ಕುಮಾರಸ್ವಾಮಿ ವಿರುದ್ಧದ ಭೂ ಒತ್ತುವರಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರ ಮಗ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೇತಗಾನಹಳ್ಳಿ ಜಮೀನಿನಲ್ಲಿ ಒಂದೇ ಒಂದು ಇಂಚು ಬೇರೆ ಅವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈಗಾಗಲೇ ಈ ಪ್ರಕರಣ ಸಂಬಂಧ ಎಲ್ಲ ಮಾಹಿತಿಗಳನ್ನು ಕಲೆಹಾಕಿದ್ದು, ನಾನು ಇದರ ಬಗ್ಗೆ ಸುದ್ದಗೋಷ್ಠಿಯಲ್ಲಿ ಮಾತನಾಡುತ್ತೇನೆ. ಆ ಜಮೀನನನ್ನು ಕುಮಾರಸ್ವಾಮಿ ಅವರು ರೈತರಿಂದ ಖರೀದಿ ಮಾಡಿರುವುದು. ಅದರಲ್ಲಿ ಸರ್ವೆ ನಂಬರ್ 7,8,9, ಇವು P ನಂಬರ್ ಜಮೀನು. ಪೋಡಿ ಆಗದ ಜಮೀನು. ಪೋಡಿ ಆಗದ ಜಮೀನು ತೆಗೆದುಕೊಳ್ಳೋದಕ್ಕೆ ಅವತ್ತು ಅವಕಾಶ ಇತ್ತು. ಪೋಡಿ ದುರಸ್ತಿ ಮಾಡೋಕೆ ಅದನ್ನು ಸರಿ ಮಾಡಬೇಕಿರೋದು ಸರ್ಕಾರ. ನಾವು ಅರ್ಜಿ ಕೊಟ್ಟರೂ ಸರ್ಕಾರ ಅದನ್ನು ಮಾಡಿಲ್ಲ ಎಂದು ಕಿಡಿಕಾರಿದರು.  

ಕುಮಾರಸ್ವಾಮಿ ಅವರು ಸಿಎಂ ಆದಾಗ ಎಷ್ಟೋ ಜನರಿಗೆ ಸಾಗುವಳಿ ಚೀಟಿಯನ್ನ ಕೊಡಿಸಿದ್ದಾರೆ. ಎರಡು ಬಾರಿ ಸಿಎಂ ಆಗಿದ್ರು. ತಪ್ಪಿದ್ದರೆ ಆಗ ಸರಿ ಮಾಡಿಸಿಕೊಳ್ಳಬಹುದಿತ್ತು. ಆದರೆ ಅದನ್ನ ಮಾಡಿಲ್ಲ. ಇದೀಗ ನೋಟಿಸ್ ಕೊಡದೆ ತೆರವು ಮಾಡುತ್ತೇವೆ ಎಂದು ಅದು ಕಾನೂನುಬಾಹಿರ. ಡಿಸಿ ಅವರು 14 ಎಕರೆ ಜಮೀನು ಒತ್ತುವರಿ ಆಗಿದೆ ಎನ್ನುತ್ತಾರೆ. ಯಾವ 14 ಎಕರೆ ಒತ್ತುವರಿ ಆಗಿದೆ ಎಂದು ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ