ಹಿಂದೂಗಳು ಮಾಂಸದ ಅಂಗಡಿಗೆ ನಾನು ಧನ ಸಹಾಯ ಮಾಡುವೆ- ರೇಣುಕಾಚಾರ್ಯ

ಶುಕ್ರವಾರ, 1 ಏಪ್ರಿಲ್ 2022 (16:05 IST)
ರಾಜ್ಯದಲ್ಲಿ ಹಲಾಲ್ ಮಾಂಸ ವಿಚಾರ ತಾರಕಕ್ಕೇರುತ್ತಿದೆ. ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಈಗಾಗಲೇ ಬಜರಂಗದಳ ಅಭಿಯಾನ ಆರಂಭಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಬೆಂಗಳೂರಿನಲ್ಲಿ ಇಂದು ಮತ್ತೊಂದು ಘೋಷಣೆ ಮಾಡಿದ್ದಾರೆ.
ಹಿಂದೂಗಳು ಮಾಂಸದ ಅಂಗಡಿ ಇಟ್ಟರೆ ನಾನೇ ಸ್ವತಃ ಧನಸಹಾಯ ಮಾಡುವುದಾಗಿ ರೇಣುಕಾಚಾರ್ಯ ಹೇಳಿದ್ದಾರೆ. ಹಿಂದೂಗಳು ಎಲ್ಲಾ ವ್ಯಾಪಾರ ಮಾಡಬೇಕು. ನಮಗೆ ಹಲಾಲ್ ಉತ್ಪನ್ನ ಬೇಡ ಎಂದು ರೇಣುಕಾಚಾರ್ಯ ಘೋಷಿಸಿದ್ದಾರೆ. ಅವರು ಹಲಾಲ್ ಮಾಡಿದ ಮಾಂಸ ನಾವು ತಿನ್ನಬೇಕಾ ಎಂದು ಪ್ರಶ್ನೆೆ ಮಾಡಿದ್ದಾರೆ. ಉಗುಳೋದು ಹಲಾಲ್ ಮಾಡೋದಾ, ಇದರ ಬಗ್ಗೆ ಕುರಾನ್ ನಲ್ಲಿ ಹೇಳಿದ್ಯಾ ಎಂದಿದ್ದಾರೆ. ವಿವಾದವನ್ನ ಹುಟ್ಟುಹಾಕಿದ್ದು ಮುಸ್ಲಿಂ ಅವರು. ಇನ್ಮುಂದೆ ಹಿಂದೂಗಳು ಎಲ್ಲಾ ವ್ಯಾಪಾರದಲ್ಲೂ ಮುಂದುಬರಬೇಕು. ನನ್ನ ಕಡೆಯಿಂದ ಹಿಂದೂಗಳಿಗೆ ಅಂಗಡಿ ಹಾಕಿಕೊಡುತ್ತೇನೆ ಹಾಗೂ ಧನ ಸಹಾಯ ಮಾಡ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ